ಛತ್ತೀಸ್ಗಢದಲ್ಲಿ ಎನ್ಕೌಂಟರ್: ನಾಲ್ವರು ನಕ್ಸಲೀಯರ ಹತ್ಯೆ
ಸುಕ್ಮಾ, ಮಾ. 27: ಸಿಆರ್ಪಿಎಫ್ನ ಕೋಬ್ರಾ ಬೆಟಾಲಿಯನ್ ಹಾಗೂ ಛತ್ತೀಸ್ಗಢ ಪೊಲೀಸ್ ಸುಕ್ಮಾದಲ್ಲಿ ಮಂಗಳವಾರ ನಡೆಸಿದ ಎನ್ಕೌಂಟರ್ನಲ್ಲಿ ಇಬ್ಬರು ಮಹಿಳೆಯರ ಸಹಿತ ನಾಲ್ವರು ನಕ್ಸಲೀಯರು ಹತರಾಗಿದ್ದಾರೆ.
ಎನ್ಕೌಂಟರ್ ನಡೆದ ಸ್ಥಳದಲ್ಲಿ ಒಂದು ಐಎನ್ಎಸ್ಎಎಸ್ ರೈಫಲ್, ಎರಡು .303 ರೈಫಲ್ಸ್ ಹಾಗೂ ಒಂದು .315 ರೈಫಲ್ ಪತ್ತೆಯಾಗಿದೆ. ನಾಲ್ವರು ನಕ್ಸಲೀಯರಲ್ಲಿ ಓರ್ವ ಪುರುಷನನ್ನು ದುಡಿ ಹಿರ್ಮಾ ಎಂದು ಹಾಗೂ ಓರ್ವ ಮಹಿಳೆಯನ್ನು ವಂಜಾಮ್ ಐಥೆಟೆ ಎಂದು ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ನಕ್ಸಲೀಯರ ಚಲನವಲನದ ಬಗ್ಗೆ ನಮಗೆ ಮೊದಲೇ ಮಾಹಿತಿ ದೊರಕಿತ್ತು. ಅನಂತರ ಶೋಧ ಕಾರ್ಯಾಚರಣೆಗೆ ಎರಡು ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಶೋಧ ಕಾರ್ಯಾಚರಣೆ ಸಂದರ್ಭ ನಕ್ಸಲೀಯರು ಗುಂಡು ಹಾರಿಸಿದರು. ಇದಕ್ಕೆ ಪ್ರತಿಯಾಗಿ ದಾಳಿ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಪಡೆ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಚುನಾವಣೆ ಹಿನ್ನೆಲೆಯಲ್ಲಿ ಇಂತಹ ಹೆಚ್ಚು ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ ಎಂದು ಸುಕ್ಮಾ ಎಸ್.ಪಿ. ಡಿ.ಡಿ. ಮಾರಾವಿ ತಿಳಿಸಿದ್ದಾರೆ.