ನಿಧಾನಗತಿಯ ಬೌಲಿಂಗ್: ಅಜಿಂಕ್ಯ ರಹಾನೆಗೆ 12 ಲಕ್ಷ ರೂ. ದಂಡ
ಜೈಪುರ, ಎ.1: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರವಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ನಿಗದಿತ ಅವಧಿಯೊಳಗೆ ತನ್ನ ಪಾಲಿನ ಓವರ್ ಮುಗಿಸದ ಹಿನ್ನೆಲೆಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಅಜಿಂಕ್ಯ ರಹಾನೆಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.
ಐಪಿಎಲ್ ನೀತಿ ಸಂಹಿತೆಯ ಪ್ರಕಾರ ರಾಜಸ್ಥಾನ ತಂಡ ಈ ವರ್ಷ ನಿಧಾನಗತಿ ಬೌಲಿಂಗ್ ವಿಚಾರಕ್ಕೆ ಸಂಬಂಧಿಸಿ ಎಸಗಿದ ಮೊದಲ ತಪ್ಪು ಇದಾಗಿದೆ. ಹೀಗಾಗಿ ರಹಾನೆಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಐಸಿಸಿ ಪ್ರಕಟನೆಯೊಂದರಲ್ಲಿ ತಿಳಿಸಿದೆ.
Next Story