ವಿಚಾರಣೆಗೆ ಹಾಜರಾದ ರಾಬರ್ಟ್ ವಾದ್ರಾ
ಹೊಸದಿಲ್ಲಿ, ಜೂ.4: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ರಾಬರ್ಟ್ ವಾದ್ರಾ ಜಾರಿ ನಿರ್ದೇಶನಾಲಯದ ಎದುರು ವಿಚಾರಣೆಗೆ ಹಾಜರಾಗಿದ್ದಾರೆ.
ವಿದೇಶದಲ್ಲಿ ಆಸ್ತಿ ಖರೀದಿಸುವ ಉದ್ದೇಶದಿಂದ ಅಕ್ರಮವಾಗಿ ಹಣ ವರ್ಗಾಯಿಸಿದ ಬಗ್ಗೆ ರಾಬರ್ಟ್ ವಾದ್ರಾ ವಿರುದ್ಧ ಆರೋಪ ದಾಖಲಾಗಿದೆ. ವಾದ್ರಾ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಅಳಿಯ. ಚಿಕಿತ್ಸೆಗಾಗಿ ಆರು ವಾರ ವಿದೇಶಕ್ಕೆ ತೆರಳಲು ಸೋಮವಾರ ವಾದ್ರಾಗೆ ದಿಲ್ಲಿ ನ್ಯಾಯಾಲಯ ಅನುಮತಿ ನೀಡಿತ್ತು. ಲಂಡನ್ಗೆ ಭೇಟಿ ನೀಡಬಾರದು ಮತ್ತು ಸಾಕ್ಷ ನಾಶಕ್ಕೆ ಪ್ರಯತ್ನಿಸಬಾರದು ಎಂಬ ಷರತ್ತು ವಿಧಿಸಲಾಗಿತ್ತು. ವಾದ್ರಾ ಲಂಡನ್ನಲ್ಲಿ ಆಸ್ತಿ ಖರೀದಿಸಿದ್ದಾರೆ ಎಂಬ ಆರೋಪವಿದೆ.
Next Story