'ಬಜೆಟ್ ಬ್ರೀಫ್ ಕೇಸ್' ಸಂಪ್ರದಾಯ ಮುರಿದ ನಿರ್ಮಲ ಸೀತಾರಾಮನ್
ಹೊಸದಿಲ್ಲಿ, ಜು.4: ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಲವು ವರ್ಷಗಳಿಂದ ಪಾಲಿಸಿಕೊಂಡು ಬರುತ್ತಿರುವ ಶಿಷ್ಟಾಚಾರವೊಂದನ್ನು ಮುರಿದು ಗಮನ ಸೆಳೆದಿದ್ದಾರೆ.
ಸಂಸತ್ತಿನಲ್ಲಿ ಶುಕ್ರವಾರ 2019-20 ರ ಸಾಲಿನ ಕೇಂದ್ರ ಬಜೆಟ್ ಮಂಡಿಸಲಿರುವ ನಿರ್ಮಲಾ ಬಜೆಟ್ ದಾಖಲೆಗಳನ್ನು ಸೂಟ್ಕೇಸ್ನಲ್ಲಿ ತರುವ ಬದಲಿಗೆ ಕೆಂಪುಬಣ್ಣದ ವಸ್ತ್ರದಲ್ಲಿ ತರುವ ಮೂಲಕ ಹಳೆ ಸಂಪ್ರದಾಯವನ್ನು ಮುರಿದರು.
ಈ ಹಿಂದೆ ಹಣಕಾಸು ಸಚಿವರು ಚರ್ಮದ ಸೂಟ್ಕೇಸ್ನಲ್ಲಿ ಬಜೆಟ್ ದಾಖಲೆಗಳನ್ನು ಸಂಸತ್ತಿಗೆ ತರುತ್ತಿದ್ದರು.
Next Story