ಪಿಎನ್ಬಿ ವಂಚನೆ: ಆರೋಪಿ ನೀರವ ಮೋದಿಯ ನ್ಯಾಯಾಂಗ ಬಂಧನ ವಿಸ್ತರಣೆ
ಲಂಡನ್,ಆ.22: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಸುಮಾರು ಎರಡು ಶತಕೋಟಿ ಡಾ.ವಂಚನೆ ಮತ್ತು ಅಕ್ರಮ ಹಣ ವಹಿವಾಟು ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ದೇಶಭ್ರಷ್ಟ ವಜ್ರಾಭರಣಗಳ ವ್ಯಾಪಾರಿ ನೀರವ್ ಮೋದಿಯ ನ್ಯಾಯಾಂಗ ಬಂಧನದ ಅವಧಿಯನ್ನು ಇಲ್ಲಿಯ ನ್ಯಾಯಾಲಯವು ಸೆ.1ರವರೆಗೆ ವಿಸ್ತರಿಸಿದೆ.
ಗುರುವಾರ ವೆಸ್ಟ್ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ನಡೆಸಿದ ಸಂಕ್ಷಿಪ್ತ ವಿಚಾರಣೆಯ ಸಂದರ್ಭದಲ್ಲಿ ನೈರುತ್ಯ ಲಂಡನ್ನ ವಾಂಡ್ಸ್ವರ್ತ್ ಜೈಲಿನಲ್ಲಿರುವ ಮೋದಿಯನ್ನು ವೀಡಿಯೊ ಲಿಂಕ್ ಮೂಲಕ ಹಾಜರು ಪಡಿಸಲಾಗಿತ್ತು.
ಕಳೆದ ಮಾರ್ಚ್ನಲ್ಲಿ ಮೋದಿಯನ್ನು ಲಂಡನ್ನಲ್ಲಿ ಬಂಧಿಸಲಾಗಿತ್ತು.
Next Story