ಸಬ್ಸಿಡಿರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಳ
ಹೊಸದಿಲ್ಲಿ, ಸೆ.1: ಅಂತಾರಾಷ್ಟ್ರೀಯ ತೈಲ ಬೆಲೆಗೆ ಅನುಗುಣವಾಗಿ ವಿಮಾನದ ಇಂಧನ ಬೆಲೆ 1 ಶೇ.ದಷ್ಟು ಕಡಿತಗೊಂಡಿದ್ದು, ಮತ್ತೊಂದೆಡೆ ಸಬ್ಸಿಡಿರಹಿತ ಅಡುಗೆ ಅನಿಲ ಸಿಲಿಂಡರ್ ಒಂದರ ಬೆಲೆ 15.5 ರೂ. ಹೆಚ್ಚಾಗಿದೆ.
12 ಸಿಲಿಂಡರ್ ಗಳ ವಾರ್ಷಿಕ ಕೋಟಾ ಮುಗಿದ ಬಳಿಕ ಗ್ರಾಹಕರು ಖರೀದಿಸುವ ಅಡುಗೆ ಅನಿಲ ಸಿಲಿಂಡರ್ ಗೆ 574.5 ರೂ. ಇದ್ದು ಇನ್ನು ಮುಂದೆ 590 ರೂ. ಪಾವತಿಸಬೇಕಾಗಿದೆ. ಕಳೆದ ತಿಂಗಳ ಆರಂಭದಲ್ಲಷ್ಟೇ ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆ 62.50 ರೂ. ಇಳಿಕೆಯಾಗಿತ್ತು.
Next Story