ಜಾಮಿಯಾದಲ್ಲಿ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಯ ಗುರುತು ಪತ್ತೆ
'ರಾಮ್ ಭಕ್ತ್ ಗೋಪಾಲ್' ವಾಲ್ ತುಂಬಾ ಪ್ರಚೋದನಕಾರಿ ಬರಹಗಳು
ಹೊಸದಿಲ್ಲಿ: ಇಲ್ಲಿನ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿವಿ ಹೊರಗಡೆ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಗುಂಡು ಹಾರಾಟ ನಡೆಸಿದ ದುಷ್ಕರ್ಮಿ ಕೃತ್ಯ ಎಸಗುವ ಕೆಲ ನಿಮಿಷಗಳ ಮೊದಲು ಫೇಸ್ ಬುಕ್ ಲೈವ್ ನಡೆಸಿದ್ದ ಎಂದು ವರದಿಯಾಗಿದೆ.
ಫೇಸ್ ಬುಕ್ ನಲ್ಲಿ ದುಷ್ಕರ್ಮಿಯ ಹೆಸರು 'ರಾಮ್ ಭಕ್ತ್ ಗೋಪಾಲ್' ಎಂದಿದ್ದು , ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿದ್ದ ಆತ ಫೇಸ್ ಬುಕ್ ಲೈವ್ ವಿಡಿಯೋ ನೀಡಿದ್ದ. ನಂತರ 'ನಿಮಗೆ ನಾನು ಆಝಾದಿ ನೀಡುತ್ತೇನೆ' ಎಂದು ಬೊಬ್ಬಿಟ್ಟು ಗುಂಡು ಸಿಡಿಸಿದ್ದ. ಗುಂಡೇಟು ತಗಲಿ ಒಬ್ಬ ವಿದ್ಯಾರ್ಥಿ ಗಾಯಗೊಂಡಿದ್ದ.
ಈ ಕೃತ್ಯಕ್ಕೆ ಈತ ಮೊದಲೇ ಸಿದ್ಧಗೊಂಡಿದ್ದ ಎನ್ನುವುದನ್ನು ಈತನ ಫೇಸ್ ಬುಕ್ ಪ್ರೊಫೈಲ್ ತೋರಿಸುತ್ತದೆ. ಈತನ ಫೇಸ್ ಬುಕ್ ವಾಲ್ ನಲ್ಲಿ ಪ್ರಚೋದನಕಾರಿ, ಸಿಎಎ ಪರ ಬರಹಗಳೇ ತುಂಬಿವೆ. "ನನ್ನ ಅಂತಿಮ ಯಾತ್ರೆಯಲ್ಲಿ ಕೇಸರಿ ಬಟ್ಟೆ ಹಾಸಿ, ಜೈಶ್ರೀರಾಮ್ ಎಂದು ಕೂಗಿ" ಎಂದು ಆತ ಬರೆದಿದ್ದಾನೆ.
"ಶಾಹೀನ್ ಬಾಗ್ , ಗೇಮ್ ಓವರ್" ಎಂದೂ ಆತ ಬರೆದಿದ್ದಾನೆ.
See the Facebook profile of 'Rambhakt Gopal' he came live on Facebook before the incident at #Jamia. Just read the comments under his post. Most of the people are appreciating him & chanting Jai Shree Ram !! #ArrestAnuragThakur pic.twitter.com/P2JmgBwhqE
— Irfan (@NextToSRK) January 30, 2020
FB page of 'Rambhakt' Gopal, the Jamia shooter. Follows the textbook MO of the new wave of radicalised extremists. Livestreams his entry to the Jamia rally. Posts a mix of threatening and 'farewell' messages. https://t.co/qMK5WWCvQD
— Sreenivasan Jain (@SreenivasanJain) January 30, 2020