ಗೋವಾದಲ್ಲಿ ನೌಕಾಪಡೆಯ ವಿಮಾನ ಪತನ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ/ಗೋವಾ, ಫೆ.23: ವಾಸ್ಕೋದ ಐಎನ್ಎಸ್ ಹಂಸ ನೌಕಾನೆಲೆಯಿಂದ ರವಿವಾರ ಬೆಳಿಗ್ಗೆ ಮಾಮೂಲು ತರಬೇತಿ ಹಾರಾಟವನ್ನು ಆರಂಭಿಸಿದ್ದ ಭಾರತೀಯ ನೌಕಾಪಡೆಯ ಮಿಗ್-29ಕೆ ವಿಮಾನವು ಪತನಗೊಂಡಿದೆ. ವಿಮಾನದ ಪೈಲಟ್ ಹೊರಗೆ ಜಿಗಿದು ಸುರಕ್ಷಿತವಾಗಿ ಪಾರಾಗಿದ್ದಾರೆ.
ಈ ಘಟನೆಯ ಬಗ್ಗೆ ವಿಚಾರಣೆಗೆ ಆದೇಶಿಸಲಾಗಿದೆ ಎಂದು ನೌಕಾಪಡೆಯು ಟ್ವೀಟಿಸಿದೆ.
Next Story