ಕೊರೊನಾ ಭೀತಿಯ ನಡುವೆ ಕೇರಳದ ಕೋಯಿಕ್ಕೋಡ್ ನಲ್ಲಿ ಹಕ್ಕಿ ಜ್ವರ
ಕೋಯಿಕ್ಕೋಡ್: ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಎರಡು ಕಡೆ ಹಕ್ಕಿ ಜ್ವರ ದೃಢಪಟ್ಟಿದ್ದು, ಕೊರೊನಾ ಭೀತಿಯಲ್ಲಿರುವ ಜನರಿಗೆ ಮತ್ತೊಂದು ಆತಂಕ ಎದುರಾಗಿದೆ.
ಕೋಯಿಕ್ಕೋಡ್ ಮಹಾನಗರ ವ್ಯಾಪ್ತಿಯಲ್ಲಿ ಎರಡು ಕೋಳಿ ಸಾಕಣೆ ಕೇಂದ್ರದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ.
"ಸ್ಯಾಂಪಲ್ ಗಳನ್ನು ಭೋಪಾಲದ ಲ್ಯಾಬ್ ಗೆ ಕಳುಹಿಸಲಾಗಿದೆ. ಕೋಯಿಕ್ಕೋಡ್ ನ ಎರಡು ಕಡೆ ಹಕ್ಕಿ ಜ್ವರ ಇರುವುದು ದೃಢಪಟ್ಟಿದೆ. ಪರಿಸ್ಥಿತಿಯ ನಿಯಂತ್ರಣಕ್ಕೆ ಎಲ್ಲಾ ಕ್ರಮ ಕೈಗೊಳ್ಳಲಾಗುವುದು. ಹೆದರುವ ಅಗತ್ಯವಿಲ್ಲ" ಎಂದು ಸಚಿವ ಕೆ. ರಾಜು ಹೇಳಿದ್ದಾರೆ.
ಪ್ರತಿ ವರ್ಷ ಈ ಅವಧಿಯಲ್ಲಿ ಇದು ಸಾಮಾನ್ಯ. ಇದರಲ್ಲಿ ಹೆದರಬೇಕಾದದ್ದು ಏನೂ ಇಲ್ಲ ಎಂದು ಕೇರಳ ಆರೋಗ್ಯ ಸಚಿವೆ ಶೈಲಜಾ ಹೇಳಿದ್ದಾರೆ.
Next Story