ಮಹಾರಾಷ್ಟ್ರದಲ್ಲಿ ಆಗಸ್ಟ್ 31ರ ತನಕ ಲಾಕ್ಡೌನ್ ವಿಸ್ತರಣೆ
ಮುಂಬೈ, ಜು.30: ಕಳೆದ ಎರಡು ತಿಂಗಳುಗಳಿಂದ ಸಡಿಲವಾಗುತ್ತಿರುವ ಮಹಾರಾಷ್ಟ್ರದ ಕೋವಿಡ್-19 ಲಾಕ್ಡೌನ್ನ್ನು ಕೊರೋನ ವೈರಸ್ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಆಗಸ್ಟ್ 31ರ ತನಕ ವಿಸ್ತರಿಸಲಾಗಿದೆ. ಬುಧವಾರ ರಾಜ್ಯದಲ್ಲಿ ಕೊರೋನ ಕೇಸ್ಗಳ ಸಂಖ್ಯೆ 4 ಲಕ್ಷ ಗಡಿ ದಾಟಿದೆ ಎಂದು ರಾಜ್ಯ ಸರಕಾರ ತಿಳಿಸಿದೆ.
ಮಹಾರಾಷ್ಟ್ರ ಸರಕಾರ ಕಳೆದ ತಿಂಗಳು ಲಾಕ್ಡೌನ್ನ್ನು ಜುಲೈ 31ರ ತನಕ ವಿಸ್ತರಿಸಿತ್ತು. ರಾಜ್ಯದ 'ಬಿಗಿನ್ ಎಗೈನ್' ಉಪಕ್ರಮದ ಭಾಗವಾಗಿ ಥಿಯೇಟರ್ಗಳು, ಫುಡ್ಕೋರ್ಟ್ಗಳು ಹಾಗೂ ರೆಸ್ಟೋರೆಂಟ್ಗಳಿಲ್ಲದೆ ಮಾಲ್ಗಳು ಹಾಗೂ ಮಾರುಕಟ್ಟೆ ಕಾಂಪ್ಲೆಕ್ಸ್ಗಳು ಬೆಳಗ್ಗೆ 9ರಿಂದ 7ರ ತನಕ ತೆರೆಯಲು ಆಗಸ್ಟ್ 5ರಿಂದ ಅವಕಾಶ ನೀಡಲಾಗಿದೆ.
Next Story