ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಡಾ. ಕಫೀಲ್ ಖಾನ್ ಬಂಧನ 3 ತಿಂಗಳು ವಿಸ್ತರಣೆ
ಹೊಸದಿಲ್ಲಿ: ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಲ್ಪಟ್ಟಿರುವ ಡಾ. ಕಫೀಲ್ ಖಾನ್ ಅವರ ಬಂಧನ ಅವಧಿಯನ್ನು ಉತ್ತರ ಪ್ರದೇಶ ಸರಕಾರವು 3 ತಿಂಗಳ ಕಾಲ ವಿಸ್ತರಿಸಿದೆ.
ರಾಷ್ಟ್ರೀಯ ಸುರಕ್ಷತಾ ಕಾಯ್ದೆ ಸಲಹಾ ಸಮಿತಿಯ ವರದಿಯಂತೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಸರಕಾರ ತಿಳಿಸಿದೆ. ಸದ್ಯ ಡಾ.ಕಫೀಲ್ ಖಾನ್ ಅವರು ಮಥುರಾ ಜೈಲಿನಲ್ಲಿದ್ದಾರೆ.
ಸಿಎಎ ಮತ್ತು ಎನ್ ಆರ್ ಸಿ ವಿರುದ್ಧ ಆಲಿಘರ್ ಮುಸ್ಲಿಂ ವಿವಿಯಲ್ಲಿ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಕಫೀಲ್ ಖಾನ್ ರನ್ನು ಬಂಧಿಸಲಾಗಿತ್ತು.
Next Story