ಮಾದಕ ವಸ್ತು ಜಾಲ ಪತ್ತೆ: 48 ಕೋಟಿ ರೂ. ಮೌಲ್ಯದ ಹೆರಾಯಿನ್ ವಶಕ್ಕೆ
7 ಮಂದಿಯ ಬಂಧನ
ಹೊಸದಿಲ್ಲಿ: ರಾಜಧಾನಿ ದಿಲ್ಲಿಯಲ್ಲಿ ನಾರ್ಕೋಟಿಕ್ಸ್ ಅಧಿಕಾರಿಗಳು ಅಂತಾರಾಷ್ಟ್ರೀಯ ಹೆರಾಯಿನ್ ಸಾಗಾಟ ಜಾಲವೊಂದನ್ನು ಭೇದಿಸಿದ್ದು, ಇಬ್ಬರು ವಿದೇಶಿಯರು ಸೇರಿ 7 ಮಂದಿಯನ್ನು ಬಂಧಿಸಿದ್ದಾರೆ. ವಶಪಡಿಸಿಕೊಳ್ಳಲಾದ ಮಾದಕವಸ್ತುವಿನ ಮೌಲ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 48 ಕೋಟಿ ರೂ. ಎನ್ನಲಾಗಿದೆ.
ಈ ಜಾಲದ ಹಿಂದಿನ ರೂವಾರಿ ವಿದೇಶದಲ್ಲಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 970 ಗ್ರಾಂ ಹೆರಾಯಿನ್ ಅನ್ನು ಎನ್ ಸಿಬಿ ಅಧಿಕಾರಿಗಳು ವಶಪಡಿಸಿಕೊಂಡ ನಂತರ ಈ ಕಾರ್ಯಾಚರಣೆ ಆರಂಭವಾಗಿತ್ತು.
Next Story