ಡ್ರಗ್ಸ್ ಪ್ರಕರಣ: ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್ ಇತರರ ಮೊಬೈಲ್ ಫೋನ್ ವಶಕ್ಕೆ ಪಡೆದ ಎನ್ಸಿಬಿ
ಮುಂಬೈ,ಸೆ.27: ಹಿಂದಿ ಚಿತ್ರ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆಯ ಭಾಗವಾಗಿ ಬಾಲಿವುಡ್ನಲ್ಲಿನ ಮಾದಕದ್ರವ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಮಾದಕ ದ್ರವ್ಯ ನಿಯಂತ್ರಣ ಸಂಸ್ಥೆ(ಎನ್ಸಿಬಿ)ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್ ಹಾಗೂ ರಕುಲ್ ಪ್ರೀತ್ ಸಿಂಗ್ ಅವರ ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆದಿದೆ.
ಹಿಂದಿ ಚಿತ್ರೋದ್ಯಮದಲ್ಲಿ ಓರ್ವ ಪ್ರಸಿದ್ಧ ನಟಿಯ ಪೈಕಿ ಒಬ್ಬರಾಗಿರುವ ದೀಪಿಕಾ ಅವರನ್ನು ಎನ್ಸಿಬಿ ಮುಂಬೈನ ಕೊಲಬಾದಲ್ಲಿ ಶನಿವಾರ ಆರು ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ಶ್ರದ್ದಾ ಕಪೂರ್ ಹಾಗೂ ಸಾರಾ ಅಲಿ ಖಾನ್ ಜೊತೆಗೆ ದೀಪಿಕಾರಿಗೂ ಎನ್ಸಿಬಿ ಸಮನ್ಸ್ ನೀಡಿತು. ಟ್ಯಾಲಂಟ್ ಮ್ಯಾನೇಜರ್ ಜಯ ಶಾ,ಫ್ಯಾಶನ್ ಡಿಸೈನರ್ ಸಿಮೊನ್ ಖಂಬಟ್ಟ ಅವರ ಮೊಬೈಲ್ ಫೋನ್ಗಳನ್ನು ಎನ್ಸಿಬಿ ಜಪ್ತಿ ಮಾಡಿದೆ
Next Story