ನಕಲಿ ಟಿಆರ್ಪಿ ಜಾಲದಲ್ಲಿರುವ ವಾಹಿನಿಗಳಿಗೆ ಜಾಹೀರಾತು ನೀಡುವುದಿಲ್ಲ: ರಾಜೀವ್ ಬಜಾಜ್
ಉದ್ಯಮದ ಮೇಲೆ ಯಾವುದೇ ಪರಿಣಾಮ ಬೀರಿದರೂ ಚಿಂತೆಯಿಲ್ಲ ಎಂದ ಖ್ಯಾತ ಕೈಗಾರಿಕೋದ್ಯಮಿ
ಮುಂಬೈ: ಮೂರು ಟೆಲಿವಿಷನ್ ಚಾನೆಲುಗಳ 'ನಕಲಿ ಟಿಆರ್ಪಿಪಿ' ಜಾಲವನ್ನು ಬೇಧಿಸಿ ಮುಂಬೈ ಪೊಲೀಸರು ಪತ್ರಿಕಾಗೋಷ್ಠಿ ನಡೆಸಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಖ್ಯಾತ ಕೈಗಾರಿಕೋದ್ಯಮಿ ರಾಜೀವ್ ಬಜಾಜ್, ತಮ್ಮ ಸಂಸ್ಥೆ ಬಜಾಜ್ ಆಟೋ ಈ ಮೂರು ಚಾನೆಲುಗಳಿಗೆ ಜಾಹೀರಾತು ನೀಡದೆ ಅವುಗಳನ್ನು ಕಪ್ಪು ಪಟ್ಟಿಯಲ್ಲಿರಿಸಲಿದೆ ಎಂದು ಹೇಳಿದ್ದಾರೆ.
ಸಮಾಜಕ್ಕೆ ಕೆಟ್ಟದ್ದು ಎಂದು ತಿಳಿಯಲಾದ ಯಾವುದರ ಜತೆಗೂ ತಮ್ಮ ಕಂಪೆನಿ ಸಂಬಂಧ ಹೊಂದಿಲ್ಲ ಎಂದು ಬಜಾಜ್ ಆಟೋ ಸಂಸ್ಥೆಯ ಆಡಳಿತ ನಿರ್ದೇಶಕರಾಗಿರುವ ರಾಜೀವ್ ಬಜಾಜ್ ತಿಳಿಸಿದ್ದಾರೆ. ಆದರೆ ಈ ವೇಳೆ ಅವರು ಈ ಚಾನೆಲುಗಳ ಹೆಸರುಗಳನ್ನು ಉಲ್ಲೇಖಿಸಿಲ್ಲ.
"ದ್ವೇಷ ಕಾರುವ ಚಾನೆಲುಗಳು ಹಾಗೂ ದೈನಿಕಗಳನ್ನು ನಮ್ಮ ತಂಡಗಳು ಗುರುತಿಸಬಲ್ಲವು, ನಮ್ಮ ಉದ್ಯಮದ ಮೇಲೆ ಅದು ಯಾವುದೇ ಪರಿಣಾಮ ಬೀರಿದರೂ ಚಿಂತೆಯಿಲ್ಲ, ಅಂತಹ ಮಾಧ್ಯಮಗಳಿಗೆ ನಾವು ಬೆಂಬಲ ನೀಡುವುದನ್ನು ಮುಂದುವರಿಸಲು ಸಾಧ್ಯವಿಲ್ಲ,'' ಎಂದು ಅವರು ಹೇಳಿದ್ದಾರೆ.
Next Story