ಮೆಹಬೂಬಾ ಮುಫ್ತಿ ಬಂಧನದಿಂದ ಮುಕ್ತಿ
ಹೊಸದಿಲ್ಲಿ: ಸುಮಾರು 14 ತಿಂಗಳುಗಳ ಕಾಲ ಬಂಧನಕ್ಕೊಳಗಾದ ಬಳಿಕ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರನ್ನು ಮಂಗಳವಾರ ತಡ ರಾತ್ರಿ ಬಿಡುಗಡೆ ಮಾಡಲಾಗಿದೆ.
ಕಳೆದ ವರ್ಷ ಆಗಸ್ಟ್ ನಲ್ಲಿ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನ ರದ್ದುಪಡಿಸಿದ ಬಳಿಕ ಮುಫ್ತಿ ವಿರುದ್ಧ ಸಾರ್ವಜನಿಕ ಸುರಕ್ಷತಾ ಕಾಯ್ದೆ(ಪಿಸಿಎ)ಅಡಿ ಆರೋಪ ಹೊರಿಸಲಾಗಿತ್ತು. ಈ ಕಾಯ್ದೆಯು ಬಂಧನಕ್ಕೆ ಅವಕಾಶ ನೀಡುವ ಕಠಿಣ ಕಾನೂನು ಆಗಿದ್ದು, ಯಾವುದೇ ವಿಚಾರಣೆ ಇಲ್ಲದೆ ಎಷ್ಟು ಬಾರಿಯೂ ಅವರ ಬಂಧನವನ್ನು ವಿಸ್ತರಿಸಬಹುದು.
ಮುಫ್ತಿ ಅವರ ಬಿಡುಗಡೆಗೆ ಸುಪ್ರೀಂಕೋರ್ಟ್ ಗಡುವು ನಿಗದಿಪಡಿಸಿದ ಬಳಿಕ ಅವರನ್ನುಬಂಧನದಿಂದ ಮುಕ್ತಗೊಳಿಸಲಾಗಿದೆ. ಮುಫ್ತಿ ಅವರ ಪುತ್ರಿ ಸುಪ್ರೀಂಕೋರ್ಟ್ ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
Next Story