ಬಿಹಾರಕ್ಕೆ 'ಉಚಿತ ಕೋವಿಡ್ ಲಸಿಕೆ' ಭರವಸೆ ನೀಡಿದ ನಿರ್ಮಲಾ ಸೀತಾರಾಮನ್ ರನ್ನು ಟೀಕಿಸಿದ ಪತ್ರಕರ್ತರು, ರಾಜಕಾರಣಿಗಳು
ಹೊಸದಿಲ್ಲಿ: ಬಿಹಾರ ವಿಧಾನಸಭಾ ಚುನಾವಣೆಗೆ ಬಿಜೆಪಿ ಬಿಡುಗಡೆಗೊಳಿಸಿರುವ ಪ್ರಣಾಳಿಕೆಯಲ್ಲಿ ಬಿಹಾರದ ಪ್ರತಿಯೊಬ್ಬ ವ್ಯಕ್ತಿಗೂ ಉಚಿತ ಕೋವಿಡ್ ಲಸಿಕೆ ಒದಗಿಸುವ ಭರವಸೆ ನೀಡಲಾಗಿರುವುದು ಪತ್ರಕರ್ತರು, ರಾಜಕಾರಣಿಗಳ ಸಹಿತ ಸಾರ್ವಜನಿಕರಿಂದ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಇಂದು ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ "ಕೋವಿಡ್-19 ಲಸಿಕೆ ಲಭ್ಯವಾಗಿ ಅದನ್ನು ದೊಡ್ಡ ಮಟ್ಟದಲ್ಲಿ ಉತ್ಪಾದಿಸಿದ ಕೂಡಲೇ ಬಿಹಾರದ ಪ್ರತಿಯೊಬ್ಬ ವ್ಯಕ್ತಿಗೂ ಉಚಿತ ಲಸಿಕೆ ದೊರೆಯಲಿದೆ. ಇದು ನಮ್ಮ ಚುನಾವಣಾ ಪ್ರಣಾಳಿಕೆಯ ಮೊದಲ ಭರವಸೆ,'' ಎಂದು ಹೇಳಿರುವುದು ತೀಕ್ಷ್ಣ ಪ್ರತಿಕ್ರಿಯೆಗೆ ಕಾರಣವಾಗಿದೆ.
ಕೋವಿಡ್ ಲಸಿಕೆಯು ಕೋವಿಡ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರಿಗೆ ಹಾಗೂ ಅತ್ಯಂತ ಹೆಚ್ಚು ಅಪಾಯ ಇರುವವರಿಗೆ ತಲುಪಿಸುವ ಬದಲು ಅದನ್ನು ರಾಜಕೀಯ ಅಸ್ತ್ರವಾಗಿಸಲಾಗುವುದೇ ಎಂಬ ಆತಂಕ ಮೂಡಿದೆ ಎಂದು ಟ್ವಿಟರಿಗರೊಬ್ಬರು ಪ್ರತಿಕ್ರಿಯಿಸಿದರೆ ಇನ್ನೊಬ್ಬರು ತಮ್ಮ ಟ್ವೀಟ್ನಲ್ಲಿ "ಭಾರತದ ವಿತ್ತ ಸಚಿವೆ ಕೋವಿಡ್ ಲಸಿಕೆಯನ್ನು ಬಿಹಾರದಲ್ಲಿ ಚುನಾವಣೆ ಗೆಲ್ಲಲು ರಾಜಕೀಯ ಅಸ್ತ್ರವನ್ನಾಗಿ ಬಳಸುತ್ತಿದ್ದಾರೆ,'' ಎಂದಿದ್ದಾರೆ.
ಹಿರಿಯ ಪತ್ರಕರ್ತೆ ಸಾಗರಿಕಾ ಘೋಸ್ ಪ್ರತಿಕ್ರಿಯಿಸಿ "ಪ್ರತಿಯೊಬ್ಬ ನಾಗರಿಕನಿಗೂ ಒದಗಿಸಬೇಕಿರುವ ಆರೋಗ್ಯ ಸೇವೆಯನ್ನು ಪಕ್ಷ ರಾಜಕಾರಣಕ್ಕಾಗಿ ಚುನಾವಣೆ ಸಂದರ್ಭ ಸಚಿವರು ಬಳಸುವ ಹಾಗಿಲ್ಲ. ಬಿಹಾರವು ಬಿಜೆಪಿಗೆ ಮತ ನೀಡಲಿ ಅಥವಾ ಬಿಡಲಿ, ಎಲ್ಲಾ ನಾಗರಿಕರಿಗೂ ಕೋವಿಡ್ ಲಸಿಕೆ ಸಮಾನವಾಗಿ ದೊರೆಯಬೇಕು,'' ಎಂದು ಟ್ವೀಟ್ ಮಾಡಿದ್ದಾರೆ. ಪತ್ರಕರ್ತೆ ಫೇ ಡಿ'ಸೋಜ ತಮ್ಮ ಟ್ವೀಟ್ ನಲ್ಲಿ ``ಇತರ ರಾಜ್ಯಗಳಿಗೂ ಉಚಿತ ಲಸಿಕೆ ದೊರೆಯಲಿದೆಯೇ? ಬಿಹಾರಕ್ಕೆ ಮೊದಲು ದೊರಕಲಿದೆಯೇ? ಬಿಜೆಪಿ ಬಿಹಾರದಲ್ಲಿ ಸೋತರೂ ಉಚಿತ ಲಸಿಕೆ ದೊರೆಯಲಿದೆಯೇ? ಇದಕ್ಕೆ ಯಾರು ಹಣ ನೀಡುತ್ತಾರೆ ರಾಜ್ಯ ಅಥವಾ ಕೇಂದ್ರ ಸರಕಾರ?'' ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಅಥವಾ ಎನ್ಡಿಎ ಅಧಿಕಾರಕ್ಕೆ ಬರದೇ ಇದ್ದರೆ ಏನಾಗುತ್ತದೆ ಎಂದೂ ಹಲವರು ಪ್ರಶ್ನಿಸಿದ್ಧಾರೆ. ನ್ಯಾಷನಲ್ ಕಾನ್ಫರೆನ್ಸ್ ನಾಯಕ ಓಮರ್ ಅಬ್ದುಲ್ಲಾ ತಮ್ಮ ಟ್ವೀಟ್ನಲ್ಲಿ "ಬಿಜೆಪಿ ಈ ಲಸಿಕೆಗಳಿಗೆ ತನ್ನ ಪಕ್ಷದ ಬೊಕ್ಕಸದಿಂದ ಖರ್ಚು ಮಾಡಲಿದೆಯೇ?'' ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಲಾಗಿರುವ ಕೋವಿಡ್ ಲಸಿಕೆ ಭರವಸೆ ಕುರಿತು ಸಮರ್ಥನೆಗೆ ನಿಂತಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಲವಿಯ ಪ್ರತಿಕ್ರಿಯಿಸಿ "ಬಿಜೆಪಿ ಪ್ರಣಾಳಿಕೆ ಉಚಿತ ಕೋವಿಡ್ ಲಸಿಕೆಯ ಭರವಸೆ ನೀಡಿದೆ. ಎಲ್ಲಾ ಯೋಜನೆಗಳಂತೆ ಕೇಂದ್ರ ಸರಕಾರ ರಾಜ್ಯಗಳಿಗೆ ಕನಿಷ್ಠ ದರದಲ್ಲಿ ಲಸಿಕೆ ಒದಗಿಸಿದ ನಂತರ ಅವುಗಳನ್ನು ಉಚಿತವಾಗಿ ಅಥವಾ ಹಣಕ್ಕೆ ಒದಗಿಸುವುದು ರಾಜ್ಯ ಸರಕಾರಗಳಿಗೆ ಬಿಟ್ಟಿದ್ದು. ಬಿಹಾರ ಬಿಜೆಪಿ ಲಸಿಕೆಗಳನ್ನು ಉಚಿತವಾಗಿ ಒದಗಿಸಲು ನಿರ್ಧರಿಸಿದೆ,'' ಎಂದಿದ್ದಾರೆ.
This is wrong at so many levels. Unbelievable. But I am pretty sure there is a justification ready, because there is a justification for everything. https://t.co/eCZAMAVkJD
— Dhanya Rajendran (@dhanyarajendran) October 22, 2020
Is this a promise or a veiled threat? Ministers cannot use health services due to every citizen for partisan party politics at election time. Whether Bihar votes @BJP4India or not, all citizens must have equal access to #COVID vaccine. #vaccinepolitics #BiharElections2020 https://t.co/R6zyL1PU0S
— Sagarika Ghose (@sagarikaghose) October 22, 2020
Questions.
— Faye DSouza (@fayedsouza) October 22, 2020
1. Will other states also get free vaccine?
2. Will Bihar get free vaccine first?
3. If BJP loses in Bihar, will the state still get the free vaccine?
4. Who is funding the distribution of free vaccine? States or Union?
5. What is govt's vaccine distribution plan? https://t.co/MdNiHE6LPW
तुम मुझे वोट दो मैं तुम्हे वैक्सीन .... what appalling cynicism! Will the ElectionCommission rap her & her shameless Govt on the knuckles? https://t.co/ri1UlWWmgD
— Shashi Tharoor (@ShashiTharoor) October 22, 2020
Will @BJP4India be paying for these vaccines from the party treasury? If it’s coming from the government treasury then how can Bihar get free vaccines while the rest of the country has to pay? There is so much wrong with this blatant populism that shamefully exploits COVID fears. https://t.co/ek796weG84
— Omar Abdullah (@OmarAbdullah) October 22, 2020
It takes lots of shameless to announce availability of vaccine to people of state as a poll promise with taking other states of country for granted, in a pandemic where the nation is placed on no.2 on worst affected chart globally.
— Niraj Bhatia (@bhatia_niraj23) October 22, 2020
Please Take Care Bihar..#का_किये_हो_मोदीजी
Politicisation of vaccine!
— THE SKIN DOCTOR (@theskindoctor13) October 22, 2020
Centre has not yet said that the vaccine will be free for all Indians but for Bihar they are promising it free for all just because they've polls. This is very unfortunate. What if Bihar don't vote BJP? Will they not get it free then? Non sense!
Means for Maharashtrian to get free vaccine, one need to wait till next Poll
— Sarcasm ™️ (@SarcasticRofl) October 22, 2020
What if Bihar won't vote for BJP ? Will they get the vaccine free or not ? And what about other states of India ? Aren't they eligible to get free vaccine ? Politicisation of vaccine by centre what else can you expect from an incompetent govt ?
— Surbhi (@SurrbhiM) October 22, 2020