ಕುನಾಲ್ ವಿರುದ್ಧ ಮತ್ತೊಮ್ಮೆ ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ಅಟಾರ್ನಿ ಜನರಲ್ ಅನುಮತಿ
ಹೊಸದಿಲ್ಲಿ: ನವೆಂಬರ್ 18ರಂದು ಸುಪ್ರೀಂಕೋರ್ಟ್ನ ಗೌರವಕ್ಕೆ ಧಕ್ಕೆ ಉಂಟು ಮಾಡುವ ಹೊಸ ಟ್ವೀಟ್ ಪೋಸ್ಟ್ ಮಾಡಿದ್ದ ಸ್ಟಾಂಡ್ ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅನುಮತಿ ನೀಡಿದ್ದಾರೆ.
ಸುಪ್ರೀಂಕೋರ್ಟಿನ ವಿರುದ್ಧ ಈ ಹಿಂದೆ ಪೋಸ್ಟ್ ಮಾಡಿರುವ ಟ್ವೀಟಿಗೆ ಸಂಬಂಧಿಸಿ ಕುನಾಲ್ ಕಾಮ್ರಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಕೆ.ಕೆ. ವೇಣುಗೋಪಾಲ್ ಅವರು ಅನುಮತಿ ನೀಡಿದ್ದರು.
ಪ್ರಯಾಗ್ ರಾಜ್ ಮೂಲದ ವಕೀಲ ಅನುಜ್ ಸಿಂಗ್ ನೀಡಿರುವ ಮನವಿಯ ಮೇರೆಗೆ ವೇಣುಗೋಪಾಲ್ ಅವರು ಕುನಾಲ್ ವಿರುದ್ಧ ಮತ್ತೊಮ್ಮೆ ಕಾನೂನು ನಿಂದನೆ ಪ್ರಕ್ರಿಯೆ ನಡೆಸಲು ಅನುಮತಿ ನೀಡಿದ್ದಾರೆ.
Next Story