ಕಾಮಿಡಿಯನ್ ಭಾರತಿ ಸಿಂಗ್ ಪತಿಯನ್ನೂ ಬಂಧಿಸಿದ ಎನ್ಸಿಬಿ
ಮುಂಬೈ:ಸುಮಾರು 15 ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ಮಾದಕ ವಸ್ತು ನಿಯಂತ್ರಣ ಬ್ಯುರೋ(ಎನ್ಸಿಬಿ)ಕಾಮಿಡಿಯನ್ ಭಾರತಿ ಸಿಂಗ್ ಅವರ ಪತಿ ಹಾರ್ಷ್ ಲಿಂಬಾಚಿಯಾರನ್ನು ರವಿವಾರ ಬೆಳಗ್ಗೆ ಬಂಧಿಸಿದೆ. ಹಾರ್ಷ್ ಅವರ ಪತ್ನಿ ಭಾರತಿಯವರನ್ನು ಶನಿವಾರ ಬಂಧಿಸಿದ ಕೆಲವೇ ಗಂಟೆಗಳ ಬಳಿಕ ಎನ್ಸಿಬಿ 33ರ ವಯಸ್ಸಿನ ಹಾರ್ಷ್ರನ್ನು ವಿಚಾರಣೆಗಾಗಿ ಕಸ್ಟಡಿಗೆ ಪಡೆದಿತ್ತು.
ಶನಿವಾರ ಬೆಳಗ್ಗೆ ಭಾರತಿ ಅವರ ಮನೆ ಮೇಲೆ ದಾಳಿ ನಡೆಸಿದ್ದಾಗ 86.5 ಗ್ರಾಮ್ನಷ್ಟು ಗಾಂಜಾವನ್ನು ಎನ್ಸಿಬಿ ವಶಕ್ಕೆ ಪಡೆದಿತ್ತು. ಬಳಿಕ ಭಾರತಿ ಹಾಗೂ ಹಾರ್ಷ್ ಅವರನ್ನು ಎನ್ಸಿಬಿಯ ಮುಂಬೈ ಕಚೇರಿಗೆ ವಿಚಾರಣೆಗಾಗಿ ಕರೆದೊಯ್ದಿತ್ತು.
ನಾವಿಬ್ಬರೂ ಮಾದಕ ವಸ್ತುವನ್ನು ಸೇವಿಸುತ್ತಿದ್ದೆವು ಎಂದು ಭಾರತಿ ಹಾಗೂ ಅವರ ಪತಿ ಒಪ್ಪಿಕೊಂಡಿದ್ದಾರೆ ಎಂದು ಎನ್ಸಿಬಿ ತಿಳಿಸಿದೆ.
Next Story