ಅಮೆರಿಕದ ಪ್ರಭಾವಿ ಸಂಸ್ಥೆಗೆ ಭಾರತ ಮೂಲದ ಸಂಸದೆ ಆಯ್ಕೆ
ಪ್ರಮೀಳಾ ಜಯಪಾಲ್
ವಾಶಿಂಗ್ಟನ್, ಡಿ. 10: ಭಾರತೀಯ-ಅಮೆರಿಕನ್ ಸಂಸದೆ ಪ್ರಮೀಳಾ ಜಯಪಾಲ್ರನ್ನು ಬುಧವಾರ ಕಾಂಗ್ರೆಶನಲ್ ಪ್ರೊಗ್ರೆಸಿವ್ ಕಾಕಸ್ (ಸಿಪಿಸಿ)ನ ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಲಾಗಿದೆ. ಈ ಮೂಲಕ ಅವರು ಅಮೆರಿಕದ 117ನೇ ಕಾಂಗ್ರೆಸ್ (ಸಂಸತ್ತು)ನ ಅತ್ಯಂತ ಪ್ರಭಾವಿ ಸಂಸದರ ಪೈಕಿ ಒಬ್ಬರಾಗಿದ್ದಾರೆ.
ನೇಮಕದ ಬಳಿಕ ಮಾತನಾಡಿದ 55 ವರ್ಷದ ಸಂಸದೆ, ತನ್ನ ಸಂಸ್ಥೆಯು ಜನಾಂಗೀಯ ಸಮಾನತೆಗೆ ಒತ್ತು ನೀಡುತ್ತದೆ, ಬಡತನ ಮತ್ತು ಅಸಮಾನತೆಯನ್ನು ನಿಭಾಯಿಸುತ್ತದೆ ಹಾಗೂ ದೇಶವನ್ನು ಪರಿವರ್ತಿಸಲು ನೆರವು ನೀಡುತ್ತದೆ ಎಂದು ಹೇಳಿದರು.
Next Story