ಭಾರತದ 150 ಸೇನಾ ಸಿಬ್ಬಂದಿಗೆ ಕೊರೋನ ಪಾಸಿಟಿವ್
ಹೊಸದಿಲ್ಲಿ: ಗಣರಾಜ್ಯೋತ್ಸವ ಹಾಗೂ ಸೇನಾ ದಿನದ ಮೆರವಣಿಗೆಯಲ್ಲಿ ಭಾಗವಹಿಸಲು ದೇಶದ ವಿವಿಧೆಡೆಯಿಂದ ಕಳೆದ ವಾರ ದಿಲ್ಲಿಗೆ ಆಗಮಿಸಿದ್ದ 150 ಸೇನಾ ಸಿಬ್ಬಂದಿಗೆ ಕೋವಿಡ್-19 ಸೋಂಕು ತಗಲಿರುವುದು ದೃಢಪಟ್ಟಿದೆ.
ಎರಡು ಮೆರವಣಿಗೆಯಲ್ಲಿ ಭಾಗವಹಿಸುವ ಎಲ್ಲ ಸಿಬ್ಬಂದಿಯ ಸುರಕ್ಷತೆ ದೃಷ್ಟಿಯಿಂದ ರೂಪಿಸಲಾದ ಕಟ್ಟುನಿಟ್ಟಾದ ಶಿಷ್ಟಾಚಾರದ ಅಡಿ ಕೋವಿಡ್-19 ಕಡ್ಡಾಯ ಪರೀಕ್ಷೆ ವೇಳೆ ಸೇನಾ ಸಿಬ್ಬಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ನವೆಂಬರ್ ಮಾಸಾಂತ್ಯದಿಂದ 2,000ಕ್ಕೂ ಅಧಿಕ ಸೇನಾ ಸಿಬ್ಬಂದಿ ಗಣರಾಜ್ಯೋತ್ಸವ ಹಾಗೂ ಸೇನಾ ದಿನದ ಮೆರವಣಿಗೆಯಲ್ಲಿ ಭಾಗವಹಿಸಲು ವಿವಿಧ ಸಾರಿಗೆ ಮೂಲಕ ದಿಲ್ಲಿಗೆ ಆಗಮಿಸಿದ್ದಾರೆ.
ಜನವರಿ 15ಕ್ಕೆ ಸೇನಾ ದಿನ ಆಚರಣೆ ಮಾಡಲಾಗುತ್ತಿದ್ದು, ಕೋವಿಡ್ 19 ಪಾಸಿಟಿವ್ ಬಂದಿರುವ ಸೇನಾ ಸಿಬ್ಬಂದಿ ಅಷ್ಟರೊಳಗೆ ಚೇತರಿಸಿಕೊಂಡು ಸುರಕ್ಷಿತ ಪ್ರದೇಶಕ್ಕೆ ಸೇರಬಹುದಾಗಿದೆ.
Next Story