ಮಾಜಿ ಕ್ರಿಕೆಟಿಗ ಮುಹಮ್ಮದ್ ಅಝರುದ್ದೀನ್ ಕಾರು ಅಪಘಾತ
ಜೈಪುರ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮುಹಮ್ಮದ್ ಅಝರುದ್ದೀನ್ ಅವರ ಕಾರು ಬುಧವಾರ ಜೈಪುರದ ಸವಾಯ್ ಮಧೋಪುರ ಜಿಲ್ಲೆಯಲ್ಲಿ ಉರುಳಿ ಬಿದ್ದಿದೆ. ಅಝರುದ್ದೀನ್ ಹಾಗೂ ಇತರ ಮೂವರು ಪ್ರಯಾಣಿಕರು ಗಾಯದಿಂದ ಪಾರಾಗಿದ್ದಾರೆ ಉಪಹಾರ ಗೃಹದ ನೌಕರನಿಗೆ ಸ್ವಲ್ಪ ಗಾಯವಾಗಿದೆ ಎಂದು ಸೂರ್ವಾಲ್ ಪೊಲೀಸ್ ಠಾಣೆಯ ಎಸ್ ಎಚ್ ಒ ಚಂದ್ರಭನ್ ಸಿಂಗ್ ಹೇಳಿದ್ದಾರೆ.
ರಸ್ತೆ ಬದಿಯ ಉಪಹಾರ ಗೃಹವೊಂದರ ಬಳಿ ಸಂಚಾರದ ಕುರಿತು ಚಾಲಕ ಮಾತುಕತೆ ನಡೆಸುತ್ತಿದ್ದಾಗ ವಾಹನವು ಪಕ್ಕದ ಮೈದಾನಕ್ಕೆ ಪಲ್ಟಿಯಾಗಿದೆ. ರಣ್ ಥಂಬೋರ್ ನಿಂದ ಕೇವಲ 6 ಕಿ.ಮೀ. ದೂರದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಎಚ್ ಎಚ್ ಒ ತಿಳಿಸಿದ್ದಾರೆ.
Next Story