ಅನಿರೀಕ್ಷಿತವಾಗಿ ಬಿಡುಗಡೆಗೊಂಡ ಕೆ.ಜಿ.ಎಫ್ 2 ಟೀಸರ್: ಕಾರಣವೇನು ಗೊತ್ತೇ?
ಹೊಸದಿಲ್ಲಿ,ಜ.07: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆ.ಜಿ.ಎಫ್ ಸಿನಿಮಾದ ಮೊದಲ ಭಾಗವು ನಿರೀಕ್ಷೆಗಿಂತ ಹೆಚ್ಚು ಜನಪ್ರಿಯತೆ ಗಳಿಸಿತ್ತು. ಚಿತ್ರವನ್ನು ಐದು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಇದೀಗ ಜ.8ರಂದು ಬೆಳಗ್ಗೆ 10 ಗಂಟೆಗೆ ನಿರ್ದೇಶಕ ಪ್ರಶಾಂತ್ ನೀಲ್ ನೇತೃತ್ವದ ಚಿತ್ರ ತಂಡವು ಕೆ.ಜಿ.ಎಫ್ ೨ ಟೀಸರ್ ಬಿಡುಗಡೆ ಮಾಡಲು ಉದ್ದೇಶಿಸಿತ್ತು. ಆದರೆ ಜ.7ರ ಸಂಜೆಯಿಂದಲೇ ಟೀಸರ್ ಟ್ವಿಟರ್ ನಾದ್ಯಂತ ಸೋರಿಕೆಯಾಗಿದೆ ಎಂದು ತಿಳಿದು ಬಂದಿದೆ.
ಟ್ವಿಟರ್ ನಲ್ಲಿ #leaked ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದ್ದು, ಹಲವಾರು ಬಳಕೆದಾರರು ಟೀಸರ್ ವೀಡಿಯೋವನ್ನು ತಮ್ಮ ಖಾತೆಗಳಲ್ಲಿ ಪ್ರಕಟಿಸಿದ್ದಾರೆ. ಈ ಕಾರಣದಿಂದ ನಿರಾಶೆಗೊಂಡಿರುವ ಚಿತ್ರತಂಡವು ಟೀಸರ್ ಬಿಡುಗಡೆ ಸಮಯದಲ್ಲಿ ಬದಲಾವಣೆ ಮಾಡಿದೆ. "ಜ.8ರಂದು ಬಿಡುಗಡೆ ಮಾಡಲು ಉದ್ದೇಶಿಸಿದ್ದ ಟೀಸರ್ ಅನ್ನು ಜ.7ರಂದು ರಾತ್ರಿ 9:29ಕ್ಕೆ ಬಿಡುಗಡೆ ಮಾಡಲಿದ್ದೇವೆ" ಎಂದು ನಿರ್ದೇಶಕ ಪ್ರಶಾಂತ್ ನೀಲ್ ಟ್ವೀಟ್ ಮಾಡಿದ್ದಾರೆ. ಸದ್ಯ ಬಿಡುಗಡೆಗೊಂಡಿರುವ ವೀಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
Hi everyone
— Prashanth Neel (@prashanth_neel) January 7, 2021
We will be releasing @KGF2TEASER AT 9.29PM tonight on @hombalefilms youtube channel.
Please show us all the love and support as always.
Thank you