ಹೊಸದಿಲ್ಲಿಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಮತ್ತು ಸ್ಫೋಟಕ ಸಾಗಾಟ: ಉತ್ತರಪ್ರದೇಶದ ವ್ಯಕ್ತಿಯ ಸೆರೆ
ಹೊಸದಿಲ್ಲಿ,ಜ.8: ಮಾರಕಾಯುಧ ಮತ್ತು ಸ್ಫೋಟಗಳನ್ನು ಸಾಗಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ದಿಲ್ಲಿ ವಿಶೇಷ ಪೊಲೀಸ್ ದಳವು ಬಂಧನಕ್ಕೊಳಪಡಿಸಿದೆ ಎಂದು timesofindia.com ವರದಿ ಮಾಡಿದೆ. ಶುಕ್ರವಾರದಂದು ಹೊಸದಿಲ್ಲಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಯನ್ನು ಆಶಿಶ್ ಎಂದು ಗುರುತಿಸಲಾಗಿದ್ದು, ಉತ್ತರಪ್ರದೇಶದ ನಿವಾಸಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಯಾವ ಕಾರಣಕ್ಕಾಗಿ ಸಾಗಾಟ ಮಾಡಲಾಗುತ್ತಿತ್ತು ಎನ್ನುವುದರ ಕುರಿತು ತನಿಖೆ ನಡೆಯುತ್ತಿದೆ ಎನ್ನಲಾಗಿದೆ. ಬಂಧಿತನ ಕೈಯಿಂದ 35 ಸೆಮಿ ಆಟೋಮೇಟೆಡ್ ಬಂದೂಕುಗಳು ಹಾಗೂ 60 ಸುತ್ತಿನ ಜೀವಂತ ಮದ್ದುಗುಂಡು (ಸ್ಫೋಟಕ)ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ವರದಿ ತಿಳಿಸಿದೆ.
Next Story