ಬಜೆಟ್ ಅಧಿವೇಶನದ ಸಂದರ್ಭ ಕೋವಿಡ್ ಶಿಷ್ಟಾಚಾರ ಅನುಸರಣೆ: ಲೋಕಸಭಾ ಸ್ಪೀಕರ್
ಹೊಸದಿಲ್ಲಿ, ಜ. 19: ಸಂಸತ್ತಿನಲ್ಲಿ ಜನವರಿ 29ರಿಂದ ಆರಂಭವಾಗ ಲಿರುವ ಬಜೆಟ್ ಅಧಿವೇಶನದ ಸಂದರ್ಭ ಕೋವಿಡ್-19 ಶಿಷ್ಟಾಚಾರಗಳ ಪ್ರಕಾರ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ. ಕಾಮನ್ವೆಲ್ತ್ ರಾಷ್ಟ್ರಗಳ ಸ್ಪೀಕರ್ಗಳು ಹಾಗೂ ನಿರ್ವಹಣಾ ಅಧಿಕಾರಿಗಳ ಸಮಾವೇಶದ ಸ್ಥಾಯಿ ಸಮಿತಿಯ ವರ್ಚುವಲ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂಸತ್ ಅಧಿವೇಶನ ಆರಂಭವಾಗುವುದಕ್ಕಿಂತ ಮುನ್ನ ಕೋವಿಡ್ ಪರೀಕ್ಷೆಗೆ ಒಳಗಾಗುವಂತೆ ಎಲ್ಲ ಸಂಸದರಲ್ಲಿ ಮನವಿ ಮಾಡಿದ್ದಾರೆ.
Next Story