12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ 8 ನೇ ತರಗತಿಯ ವಿದ್ಯಾರ್ಥಿ
ಬರೇಲಿ: ಉತ್ತರಪ್ರದೇಶದ ಬರೇಲಿಯಲ್ಲಿ 8ನೇ ತರಗತಿಯ ವಿದ್ಯಾರ್ಥಿ ತನ್ನ ನೆರೆಮನೆಯ 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಲು ಪ್ರಯತ್ನಿಸಿದ ಆರೋಪ ಎದುರಿಸುತ್ತಿದ್ದಾನೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಬಾಲಕಿಯ ತಾಯಿ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ್ದೇವೆ ಎಂದು ಸ್ಟೇಶನ್ ಹೌಸ್ ಆಫೀಸರ್ ಕೆ.ಕೆ. ವರ್ಮಾ ಹೇಳಿದ್ದಾರೆ.
14ರ ವಯಸ್ಸಿನ ಬಾಲಕನ ಕುಟುಂಬದ ಮೂವರು ಸದಸ್ಯರ ವಿರುದ್ಧ ಜೀವ ಬೆದರಿಕೆ ಒಡಿದ್ದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಂಗಳವಾರ ಮಧ್ಯಾಹ್ನ ಕೆಲಸ ಮುಗಿಸಿ ಮನೆಗೆ ವಾಪಸಾದಾಗ ಮಗಳು ಬೊಬ್ಬೆ ಹಾಕಿದ್ದು ಕೇಳಿತು. ಮನೆಯೊಳಗೆ ಹೋಗಿ ನೋಡಿದಾಗ, ಹುಡುಗ ತನ್ನ ಮಗಳನ್ನು ಅತ್ಯಾಚಾರ ನಡೆಸಲು ಯತ್ನಿಸುತ್ತಿದ್ದ. ನನ್ನನ್ನು ನೋಡಿದ ತಕ್ಷಣ ಪರಾರಿಯಾಗಿದ್ದ ಬಾಲಕನ ತನ್ನ ಬಳಿ ಚೂರಿ ಇಟ್ಟುಕೊಂಡಿದ್ದ ಬಾಲಕಿಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆ ನಡೆದ ಬಳಿಕ ಬಾಲಕನ ಕುಟುಂಬದ ಮೂವರು ಸದಸ್ಯರು ಬಾಲಕಿಯ ಮನೆಗೆ ಬಂದು ಜೀವ ಬೆದರಿಕೆ ಒಡ್ಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.