ವಾಯುಮಾಲಿನ್ಯವುಂಟು ಮಾಡುವ ಹಳೆಯ ವಾಹನಗಳಿಗೆ ‘ಹಸಿರು ತೆರಿಗೆ’: ಗಡ್ಕರಿ ಒಪ್ಪಿಗೆ
ಹೊಸದಿಲ್ಲಿ,ಜ.25: ವಾಯುಮಾಲಿನ್ಯವನ್ನುಂಟು ಮಾಡುವ ಹಳೆಯ ವಾಹನಗಳಿಗೆ ‘ಹಸಿರು ತೆರಿಗೆ ’ಯನ್ನು ವಿಧಿಸುವ ಪ್ರಸ್ತಾವಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಹಸಿರು ನಿಶಾನೆಯನ್ನು ತೋರಿಸಿದ್ದಾರೆ. ಪ್ರಸ್ತಾವವು ವಿಧ್ಯುಕ್ತವಾಗಿ ಅಧಿಸೂಚಿತಗೊಳ್ಳುವ ಮುನ್ನ ಸಮಾಲೋಚನೆಗಾಗಿ ರಾಜ್ಯಗಳಿಗೆ ಸಲ್ಲಿಕೆಯಾಗಲಿದೆ ಎಂದು ಗಡ್ಕರಿಯವರ ಸಚಿವಾಲಯವು ತಿಳಿಸಿದೆ.
ಪ್ರಸ್ತಾವದಲ್ಲಿ ಸೂಚಿಸಿರುವಂತೆ ಫಿಟ್ನೆಸ್ ಸರ್ಟಿಫಿಕೇಟ್ನ ನವೀಕರಣದ ಸಂದರ್ಭದಲ್ಲಿ ಎಂಟು ವರ್ಷಕ್ಕಿಂತ ಹಳೆಯ ಸಾರಿಗೆ ವಾಹನಗಳಿಗೆ ರಸ್ತೆ ತೆರಿಗೆಯ ಶೇ.10ರಿಂದ ಶೇ.25ರಷ್ಟು ಹಸಿರು ತೆರಿಗೆಯನ್ನು ವಿಧಿಸಬಹುದು.
Next Story