'ಮನ್ ಕಿ ಬಾತ್' ನಲ್ಲಿ ಆಸ್ಟ್ರೇಲಿಯದಲ್ಲಿ ಟೀಮ್ ಇಂಡಿಯಾ ಸಾಧನೆ ಶ್ಲಾಘಿಸಿದ ಪ್ರಧಾನಿ ಮೋದಿ
ಹೊಸದಿಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ತಿಂಗಳ ರೇಡಿಯೊ ಕಾರ್ಯಕ್ರಮ 'ಮನ್ ಕಿ ಬಾತ್' ನಲ್ಲ್ಲಿ ಆಸ್ಟ್ರೇಲಿಯ ನೆಲದಲ್ಲಿ ಆಸ್ಟ್ರೇಲಿಯದ ವಿರುದ್ಧ ಐತಿಹಾಸಿಕ ಟೆಸ್ಟ್ ಸರಣಿ ಜಯಿಸಿರುವ ಟೀಮ್ ಇಂಡಿಯಾದ ಸಾಧನೆಯನ್ನು ಕೊಂಡಾಡಿದರು. ಈ ತಂಡದ ಕಠಿಣ ಪರಿಶ್ರಮ ಹಾಗೂ ಸಂಘಟಿತ ಪ್ರದರ್ಶನ ಎಲ್ಲರಿಗೂ ಸ್ಫೂರ್ತಿಯಾಗಿದೆ ಎಂದರು.
ನಾವು ಈ ತಿಂಗಳು ಕ್ರಿಕೆಟ್ ಪಿಚ್ ನಿಂದ ಸಿಹಿಸುದ್ದಿ ಪಡೆದಿದ್ದೆವು. ಆರಂಭದಲ್ಲಿ ಏರಿಳಿತ ಕಂಡ ಭಾರತೀಯ ಕ್ರಿಕೆಟ್ ತಂಡ ದಿಟ್ಟವಾಗಿ ಮರು ಹೋರಾಟ ನೀಡಿತು. ಆಸ್ಟ್ರೇಲಿಯದಲ್ಲಿ ಸರಣಿಯನ್ನು ಜಯಿಸಿತು. ನಮ್ಮ ತಂಡದ ಕಠಿಣ ಪರಿಶ್ರಮ ಹಾಗೂ ಟೀಮ್ ವರ್ಕ್ ಸ್ಫೂರ್ತಿದಾಯಕವಾಗಿದೆ ಎಂದರು.
ಟೀಮ್ ಇಂಡಿಯಾವನ್ನು ಹೊಗಳಿದ ಪ್ರಧಾನಿ ಮೋದಿಗೆ ಬಿಸಿಸಿಐ ಧನ್ಯವಾದ ತಿಳಿಸಿದೆ.
Next Story