ನಟ ಶೇಖರ್ ಸುಮನ್ ಪುತ್ರ ಆತ್ಮಹತ್ಯೆಗೈದಿದ್ದಾರೆಂದು ಸುದ್ದಿ ಪ್ರಕಟಿಸಿದ ಝೀ ನ್ಯೂಸ್
ವಾಹಿನಿಯ ಪರವಾನಿಗೆ ರದ್ದುಗೊಳಿಸುವಂತೆ ಆಗ್ರಹಿಸಿದ ನಟ
ಹೊಸದಿಲ್ಲಿ: ಬಿಜೆಪಿ ಪರ ವಾಹಿನಿಯೆಂದೇ ಜನರ ನಡುವೆ ಪ್ರಚಾರದಲ್ಲಿರುವ ಝೀ ನ್ಯೂಸ್ ನ ಪರವಾನಿಗೆ ರದ್ದುಗೊಳಿಸಬೇಕೆಂದು ಹಿರಿಯ ನಟ ಶೇಖರ್ ಸುಮನ್ ಅವರು ಆಗ್ರಹಿಸಿದ್ದಾರೆ. ಶೇಖರ್ ಅವರ ಪುತ್ರ ಅಧ್ಯಯನ್ ಸುಮನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಸುಳ್ಳು ಸುದ್ದಿಯನ್ನು ಇತ್ತೀಚೆಗೆ ಝೀ ಪ್ರಸಾರ ಮಾಡಿದ್ದ ಕಾರಣದಿಂದಾಗಿ ಶೇಖರ್ ಸುಮನ್ ಈ ಹೇಳಿಕೆ ನೀಡಿದ್ದಾರೆ.
ಝೀ ನ್ಯೂಸ್ ಸುಳ್ಳು ಸುದ್ದಿ ಪ್ರಸಾರ ಮಾಡಿದ ಬೆನ್ನಿಗೇ ಕೆಂಡಾಮಂಡಲರಾದ ಅಧ್ಯಯನ್ ಟ್ವೀಟ್ ಮಾಡಿ "ಝೀ ನ್ಯೂಸ್ ಅದ್ಹೇಗೆ ಇಂತಹ ಸುದ್ದಿ ಪ್ರಕಟಿಸಿದೆ?. ನಿಮ್ಮಂತಹ ಅಸಹ್ಯಕರ ಜನರಿಂದ ನನ್ನ ಕುಟುಂಬಕ್ಕೆ ನೋವುಂಟಾಗಿದೆ ಇದಕ್ಕಾಗಿ ನೀವು ಬೆಲೆ ತೆರಬೇಕಿದೆ. ಈ ಜನರು ಟಿಆರ್ಪಿಗಾಗಿ ಏನು ಬೇಕಾದರೂ ಮಾಡುತ್ತಾರೆಂದು ಜಗತ್ತಿಗೆ ಗೊತ್ತಾಗುವಂತಾಗಲು ನನಗೆ ಸಹಾಯ ಮಾಡಿ" ಎಂದು ಬರೆದಿದ್ದಾರೆ.
ತರುವಾಯ ಶೇಖರ್ ಸುಮನ್ ಟ್ವೀಟ್ ಮಾಡಿ "ಅವರ ಲೈಸನ್ಸ್ ರದ್ದುಗೊಳಿಸಬೇಕಿದೆ. ಹಲವು ರೀತಿಯಲ್ಲಿ ವ್ಯಾಪಕ ಹಾನಿಯುಂಟು ಮಾಡುವ ನಕಲಿ ಸುದ್ದಿಗಳ ಹಿಂದಿನ ಜನರಿಗೆ ಶಿಕ್ಷೆ ನೀಡಬೇಕೆಂದು ಪ್ರಧಾನಿ ಕೂಡ ಸ್ಪಷ್ಟವಾಗಿ ಹೇಳಿದ್ದಾರೆ" ಎಂದು ಬರೆದಿದ್ದಾರೆ.
ಅದೇ ಸಮಯ ಅಧ್ಯಯನ್ ಆತ್ಮಹತ್ಯೆಯ ಸುಳ್ಳು ಸುದ್ದಿಯಿಂದಾಗಿ ಕುಟುಂಬಕ್ಕಾದ ನೋವಿನ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಲು ತಮಗೆ ಕರೆ ಮಾಡಿದ ರಿಪಬ್ಲಿಕ್ ಟಿವಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಅವರಿಗೆ ಶೇಖರ್ ಸುಮನ್ ಧನ್ಯವಾದ ಹೇಳಿದ್ದಾರೆ.
ಸುಳ್ಳು ಸುದ್ದಿ ಪ್ರಸಾರ ಮಾಡಿದ ಝೀ ನ್ಯೂಸ್ ವಿರುದ್ಧ ನೆಟ್ಟಿಗರೂ ವ್ಯಾಪಕವಾಗಿ ಕಿಡಿಕಾರಿದ್ದಾರೆ.
How on earth could @ZeeNews write that I have committed suicide !?!! What the hell you sick people ! You have given grief to my family by doing this and you will pay for this ! People please help me spread this the word the world needs to see how sick they can be for trps ! pic.twitter.com/kwqe6F3Xef
— adhyayan summan (@AdhyayanSsuman) February 20, 2021
Some random apology by one of @ZeeNews regular journalists is not accepatable for such an unpardonable act.The bosses shld have some shame and own up to their faux-pas which is deplorable.Imagine if they had done the same to any of the political big-wigs.
— Shekhar Suman (@shekharsuman7) February 22, 2021
Must SUE the channel for spreading such false news https://t.co/vqrDl7av8H
— Rezy Singh (@SinghRezy) February 21, 2021
Omg this @Zeenews has lost it totally
— Yachna kumar #SSR Warrior (@kumar_yachna) February 20, 2021
RIP Zee news
WTF ? Gatiya channel toh tha ye @ZeeNews .. lekin TRP k liye itna niche gir jayega kabhi socha nhi tha. This shows how unprofessional they are. And this also proves they run news without confirming it. Matlab trp k liye kuch bhi chala dege ..
— anil choudhary (@anilchrocks) February 20, 2021
Because it's @ZeeNews . They can do anything. They are sick
— Jasmine Sethi (@JasmineSethi3) February 21, 2021