ಈ ನಗರದಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆಗೆ ಪಂಚತಾರಾ ಹೊಟೇಲ್ ಬಳಸಿಕೊಳ್ಳಲಿರುವ ಆಸ್ಪತ್ರೆಗಳು
ಮುಂಬೈ: ಸೌಮ್ಯ ಲಕ್ಷಣವಿರುವ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ಮುಂಬೈನ ಆಸ್ಪತ್ರೆಗಳು ನಗರದಲ್ಲಿರುವ ಪಂಚತಾರಾ ಹೋಟೆಲ್ ಗಳನ್ನು ಬಳಸಿಕೊಳ್ಳಲಿವೆ ಎಂದು ನಗರದ ಆಡಳಿತ ಇಂದು ತಿಳಿಸಿದೆ.
ಖಾಸಗಿ ಆಸ್ಪತ್ರೆಗಳು ನಾಲ್ಕು ಸ್ಟಾರ್ ಅಥವಾ 5 ಸ್ಟಾರ್ ಗಳ ಹೊಟೇಲ್ಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಿವೆ ಹಾಗೂ ಹೆಚ್ಚಿನ ಆರೈಕೆಯ ಅಗತ್ಯವಿಲ್ಲದವರನ್ನು ಖಾಸಗಿ ಆಸ್ಪತ್ರೆಗಳಿಂದ ಹೊಟೇಲ್ ಗಳಿಗೆ ಸ್ಥಳಾಂತರಿಸುವ ಸಾಧ್ಯತೆಯಿದೆ.’
ನಿಜವಾಗಿಯೂ ಅಗತ್ಯವಿರುವ ರೋಗಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆ ಬೆಡ್ ಗಳಿಗೆ ಸಿಗುವುದನ್ನು ಖಚಿತಪಡಿಸಲು ಈ ಹೆಜ್ಜೆ ಇಡಲಾಗುತ್ತಿದೆ. ಮುಂಬೈ ಹಾಗೂ ಮಹಾರಾಷ್ಟ್ರದ ಇತರ ನಗರಗಳು ಭಾರೀ ಸಂಖ್ಯೆಯ ಕೋವಿಡ್ ಪ್ರಕರಣಗಳನ್ನು ಎದುರಿಸುತ್ತಿರುವ ಕಾರಣ ಈ ಆದೇಶ ನೀಡಲಾಗಿದೆ.
ಖಾಸಗಿ ಆಸ್ಪತ್ರೆಗಳಲ್ಲಿನ ಅನೇಕ ಬೆಡ್ ಗಳನ್ನು ತುರ್ತು ವೈದ್ಯಕೀಯ ಅಗತ್ಯವಿಲ್ಲದ ರೋಗಿಗಳಿಂದ ಆಕ್ರಮಿಸಿಕೊಂಡಿರುವುದು ಕಂಡುಬಂದಿದೆ. ಅಂತಹ ರೋಗಿಗಳನ್ನು ಸ್ಟೆಪ್ ಡೌನ್ ಸೌಲಭ್ಯಗಳಂತಹ ಪ್ರತ್ಯೇಕ ಸೌಲಭ್ಯಗಳಲ್ಲಿ ಪರಿಣಾಮಕಾರಿಯಾಗಿ ಹಾಗೂ ಸಮರ್ಪಕವಾಗಿ ನಿರ್ವಹಿಸಬಹುದು ಎಂದು ಸಾರ್ವಜನಿಕ ಆರೋಗ್ಯ ಇಲಾಖೆಯ ಪ್ರಕಟನೆ ತಿಳಿಸಿದೆ.