ಬಿಜೆಪಿ ನಾಯಕ ಹನುಮಾನ್ ಮಿಶ್ರಾ ಕೊರೋನದಿಂದ ನಿಧನ
ಲಕ್ನೊ: ಕೋವಿಡ್-19 ಸೋಂಕಿನಿಂದ ಬಳಲುತ್ತಿದ್ದ ಉತ್ತರಪ್ರದೇಶದ ಬಿಜೆಪಿ ನಾಯಕ ಹನುಮಾನ್ ಮಿಶ್ರಾ ಅವರು ಲಕ್ನೊದ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಮಂಗಳವಾರ ಮೃತಪಟ್ಟಿದ್ದಾರೆ.
ಉತ್ತರಪ್ರದೇಶ ಸಹಕಾರಿ ಸಂಘಟನೆಯ ಅಧ್ಯಕ್ಷರಾಗಿದ್ದ ಮಿಶ್ರಾ ಅವರು ಕೋವಿಡ್-19 ಚಿಕಿತ್ಸೆಗಾಗಿ ಲಕ್ನೊದ ಪಿಜಿಐ ಆಸ್ಪತ್ರೆಗೆ ದಾಖಲಾಗಿದ್ದರು.
ದೇಶದಲ್ಲಿ ಮಹಾರಾಷ್ಟ್ರದ ಬಳಿಕ ಉತ್ತರಪ್ರದೇಶದಲ್ಲಿ ಅತ್ಯಂತ ಹೆಚ್ಚು ಸಂಖ್ಯೆಯ ಕೊರೋನ ಸೋಂಕು ವರದಿಯಾಗುತ್ತಿವೆ. ಮಹಾರಾಷ್ಟ್ರದಲ್ಲಿ 58,924 ಕೇಸ್ ಗಳು ವರದಿಯಾಗಿದ್ದರೆ, ಉತ್ತರಪ್ರದೇಶದಲ್ಲಿ 28,211 ಕೇಸ್ ಗಳು ದಾಖಲಾಗಿವೆ.
Next Story