ಕೋವಿಡ್-19ನಿಂದ ಸೀತಾರಾಮ್ ಯೆಚೂರಿ ಪುತ್ರ ಆಶೀಷ್ ನಿಧನ
ಫೋಟೊ : thehindu.com
ಹೊಸದಿಲ್ಲಿ: ಕೋವಿಡ್-19 ಸೋಂಕಿಗೆ ಒಳಗಾಗಿದ್ದ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರ ಪುತ್ರ ಆಶೀಷ್ ಯೆಚೂರಿ ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾರೆ.
ಆಶೀಷ್ ಗೆ 35 ವರ್ಷ ವಯಸ್ಸಾಗಿತ್ತು. ಕೊರೋನ ಸೋಂಕು ಅವರ ಶ್ವಾಸಕೋಶಕ್ಕೆ ಹರಡಿದ ಬಳಿಕ ಎಪ್ರಿಲ್ 22ರಿಂದ ಐಸಿಯುನಲ್ಲಿದ್ದರು.
ಇಂದು ಬೆಳಗ್ಗೆ ಕೋವಿಡ್-19ನಿಂದಾಗಿ ನನ್ನ ಹಿರಿಯ ಮಗನನ್ನು ಕಳೆದುಕೊಂಡಿದ್ದೇನೆ ಎಂದು ತಿಳಿಸಲು ತುಂಬಾ ಬೇಸರವಾಗುತ್ತದೆ. ನನಗೆ ಭರವಸೆ ನೀಡಿದ್ದ, ಪುತ್ರನಿಗೆ ಚಿಕಿತ್ಸೆ ನೀಡಿದ ವೈದ್ಯರು, ನರ್ಸ್ಗಳು, ಮುಂಚೂಣಿ ಆರೋಗ್ಯ ಕಾರ್ಯಕರ್ತರು, ನೈರ್ಮಲ್ಯ ಕಾರ್ಮಿಕರು ಹಾಗೂ ನಮ್ಮೊಂದಿಗೆ ನಿಂತ ಅಸಂಖ್ಯಾತ ಜನರಿಗೂ ಧನ್ಯವಾದ ಹೇಳುತ್ತೇನೆ ಎಂದು ಯೆಚೂರಿ ಟ್ವೀಟ್ ಮಾಡಿದ್ದಾರೆ.
Next Story