ಕೋವಿಡ್ ಸೋಂಕಿತ ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ರೈಲ್ವೆ ಉದ್ಯೋಗಿ
ಸಾಂದರ್ಭಿಕ ಚಿತ್ರ
ಪಾಟ್ನಾ(ಬಿಹಾರ),ಎ.26: ವ್ಯಕ್ತಿಯೋರ್ವ ತನ್ನ ಕೋವಿಡ್-19 ಸೋಂಕಿತ ಪತ್ನಿಯನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಪಾಟ್ನಾದಲ್ಲಿ ರವಿವಾರ ತಡರಾತ್ರಿ ಸಂಭವಿಸಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ಅತುಲ್ ಲಾಲ್ ರೈಲ್ವೆ ಉದ್ಯೋಗಿಯಾಗಿದ್ದರೆ ಪತ್ನಿ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ದಂಪತಿ ಇಲ್ಲಿಯ ಪತ್ರಕಾರ್ ನಗರದಲ್ಲಿ ವಾಸವಾಗಿದ್ದರು. ಪತ್ನಿಯನ್ನು ಕೊಂದ ಬಳಿಕ ಲಾಲ್ ಮನೆಯ ಟೆರೇಸ್ನಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದರು.
Next Story