ಆರ್ಬಿಐ ಉಪ ಗವರ್ನರ್ ಆಗಿ ರಾಬಿ ಶಂಕರ್ ನೇಮಕ
ಆರ್ಬಿಐ ಉಪ ಗವರ್ನರ್ ಆಗಿ ರಾಬಿ ಶಂಕರ್ ನೇಮಕ ಮುಂಬೈ, ಮೇ 2: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕಾರ್ಯಕಾರಿ ನಿರ್ದೇಶಕ ಟಿ. ರಾಬಿ ಸಂಕರ್ ಅವರನ್ನು ಆರ್ಬಿಐಯ ಉಪ ಗವರ್ನರ್ ಆಗಿ ಕೇಂದ್ರ ಸರಕಾರ ನಿಯೋಜಿಸಿದೆ. ತನ್ನ ಒಂದು ವರ್ಷದ ವಿಸ್ತರಣಾ ಅಧಿಕಾರಾವಧಿ ಪೂರ್ಣಗೊಳಿಸಿದ ಬಳಿಕ ಎಪ್ರಿಲ್ 2ರಂದು ನಿವೃತ್ತರಾದ ಬಿ.ಪಿ. ಕನುಂಗೊ ಅವರಿಂದ ತೆರವಾದ ಸ್ಥಾನಕ್ಕೆ ಶಂಕರ್ ಅವರು ನಿಯೋಜಿತರಾಗಿದ್ದಾರೆ. ಮೂರು ವರ್ಷ ಅಧಿಕಾರಾವಧಿಗೆ ಅಥವಾ ಕಡ್ಡಾಯ ನಿವೃತ್ತಿವರೆಗೆ ರಾಬಿ ಶಂಕರ್ ಅವರನ್ನು ನಿಯೋಜಿಸಿ ಸಂಪುಟದ ನಿಯೋಜನಾ ಸಮಿತಿ ಶನಿವಾರ ನಿರ್ಧಾರ ತೆಗೆದುಕೊಂಡಿದೆ. ಇತರ ಮೂವರು ಉಪ ಗವರ್ನರ್ ಗಳೆಂದರೆ ಮೈಕೆಲ್ ಡಿ. ಪಾತ್ರ, ಮುಖೇಶ ಕುಮಾರ್ ಜೈನ್ ಹಾಗೂ ರಾಜೇಶ್ವರ ರಾವ್.
Next Story