ಕೋವಿಡ್ ಮಾರ್ಗಸೂಚಿ ಪಾಲಿಸದೇ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ 21 ಮಂದಿ ಮೃತ್ಯು
ಜೈಪುರ: ಕೋವಿಡ್ ನಿಂದಾಗಿ ಮೃತನಾಗಿದ್ದ ವ್ಯಕ್ತಿಯೊಬ್ಬನ ಅಂತ್ಯಕ್ರಿಯೆಯನ್ನು ಕೋವಿಡ್ ಮಾರ್ಗ ಸೂಚಿಯ ಪ್ರಕಾರ ನಡೆಸದ ಕೆಲವೇ ದಿನಗಳಲ್ಲಿ 21 ಮಂದಿ ಮೃತಪಟ್ಟಿರುವ ಘಟನೆ ರಾಜಸ್ಥಾನದ ಸಿಕಾರ್ ಜಿಲ್ಲೆಯ ಖೀರ್ವಾ ಗ್ರಾಮದಲ್ಲಿ ನಡೆದಿದೆ.
ಕೋವಿಡ್ ನಿಂದ ಮೃತಪಟ್ಟಿದ್ದ ವ್ಯಕ್ತಿಯ ಮೃತದೇಹವನ್ನು ಎ.21ರಂದು ಗ್ರಾಮಕ್ಕೆ ತರಲಾಗಿತ್ತು. ಈ ಸಂದರ್ಭದಲ್ಲಿ ಕೋವಿಡ್ ಮಾರ್ಗಸೂಚಿ ಪಾಲಿಸದೇ ಅಂತ್ಯ ಸಂಸ್ಕಾರ ನಡೆಸಲಾಗಿತ್ತು. ಸುಮಾರು 150 ಮಂದಿ ಅಂತ್ಯ ಕ್ರಿಯೆಯಲ್ಲಿ ಪಾಲ್ಗೊಂಡಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಂತ್ಯ ಕ್ರಿಯೆ ವೇಳೆ ಶವವನ್ನು ಪ್ಲಾಸ್ಟಿಕ್ ಚೀಲದಿಂದ ಹೊರ ತೆಗೆಯಲಾಗಿದ್ದು, ಈ ಸಂದರ್ಭದಲ್ಲಿ ಹಲವರು ಶವವನ್ನು ಮುಟ್ಟಿದ್ದಾರೆ ಎನ್ನಲಾಗಿದೆ.
21 ಜನರ ಪೈಕಿ 4 ಮಂದಿ ಮಾತ್ರ ಕೋವಿಡ್ ನಿಂದ ಮೃತಪಟ್ಟಿದ್ದು, ಉಳಿದವರು ವಯೋಸಹಜ ಕಾರಣದಿಂದ ಮೃತಪಟ್ಟಿದ್ದಾರೆ. ಮೃತಪಟ್ಟ 147 ಕುಟುಂಬಗಳ ಎಲ್ಲ ಸದಸ್ಯರ ಗಂಟಲು ಮಾದರಿಯನ್ನು ಪರೀಕ್ಷೆಗಾಗಿ ತೆಗೆದುಕೊಳ್ಳಲಾಗಿದೆ ಎಂದು ಲಕ್ಷ್ಮಣ ಗಢದ ಉಪ ವಿಭಾಗೀಯ ಅಧಿಕಾರಿ ಕುಲರಾಜ್ ಮೀನಾ ಹೇಳಿದ್ದಾರೆ.