ಗುಜರಾತ್ ಕೇಡರ್ ಐಪಿಎಸ್ ಅಧಿಕಾರಿ ರಾಕೇಶ್ ಅಸ್ತಾನಾ ದಿಲ್ಲಿ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕಾರ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಗುಜರಾತ್ ಕೇಡರ್ ಹಿರಿಯ ಐಪಿಎಸ್ ಅಧಿಕಾರಿ ರಾಕೇಶ್ ಅಸ್ತಾನಾ ದಿಲ್ಲಿ ಪೊಲೀಸ್ ಆಯುಕ್ತರಾಗಿ ಬುಧವಾರ ಅಧಿಕಾರ ವಹಿಸಿಕೊಂಡರು.
ದಿಲ್ಲಿಯ ಜೈ ಸಿಂಗ್ ಮಾರ್ಗದಲ್ಲಿರುವ ದಿಲ್ಲಿ ಪೊಲೀಸ್ ಪ್ರಧಾನ ಕಚೇರಿಗೆ ರಾಕೇಶ್ ಅಸ್ತಾನಾ ಆಗಮಿಸಿದ ನಂತರ ಅವರನ್ನು ಪೊಲೀಸ್ ಪಡೆ ಗೌರವ ಸಲ್ಲಿಸಿತು.
"ನಾನು ಇಂದು ದಿಲ್ಲಿ ಪೊಲೀಸ್ ಆಯುಕ್ತನಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಪೋಲಿಸಿಂಗ್ನ ಮೂಲಭೂತ ಪರಿಕಲ್ಪನೆಗಳನ್ನು ನಾನು ನಂಬಿದ್ದೇನೆ, ಅಂದರೆ ಕಾನೂನು ಸುವ್ಯವಸ್ಥೆ ಕಾಪಾಡುವುದು, ಅಪರಾಧವನ್ನು ತಡೆಗಟ್ಟುವುದು ನಾವು ಮಾಡಬೇಕಾದ ಮೂಲ ವಿಷಯ. ಈ ಕೆಲಸಗಳನ್ನು ಸರಿಯಾಗಿ ಮಾಡಿದರೆ ಸಮಾಜದಲ್ಲಿ ಶಾಂತಿ ಮೇಲುಗೈ ಸಾಧಿಸುತ್ತದೆ. ಕೆಲವು ವಿಶೇಷ ಸಮಸ್ಯೆಗಳಿವೆ, ಇದಕ್ಕಾಗಿ ಪ್ರತ್ಯೇಕ ಎಸ್ಒಪಿಗಳಿವೆ. ನಾವು ಕ್ರಮಬದ್ಧವಾಗಿ ಕೆಲಸ ಮಾಡುತ್ತೇವೆ’ ಎಂದು ರಾಕೇಶ್ ಹೇಳಿದರು.
Next Story