5 ಜಿ ವೈರ್ ಲೆಸ್ ನೆಟ್ವರ್ಕ್ ವಿರುದ್ದ ಸಲ್ಲಿಸಿದ್ದ ಅರ್ಜಿ ಹಿಂಪಡೆದ ಜುಹಿ ಚಾವ್ಲಾ
ಹೊಸದಿಲ್ಲಿ: 5 ಜಿ ವೈರ್ಲೆಸ್ ನೆಟ್ವರ್ಕ್ ತಂತ್ರಜ್ಞಾನದ ವಿರುದ್ಧದ ಮೊಕದ್ದಮೆಯನ್ನು ವಜಾಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಜುಹಿ ಚಾವ್ಲಾ ಅವರು ದಿಲ್ಲಿ ಹೈಕೋರ್ಟ್ಗೆ ಸಲ್ಲಿಸಿರುವ ಅರ್ಜಿಯನ್ನುಗುರುವಾರ ಹಿಂಪಡೆದಿದ್ದಾರೆ.
ನ್ಯಾಯಮೂರ್ತಿ ಜಯಂತ್ ನಾಥ್ ಅವರು ಚಾವ್ಲಾ ಅವರ ವಕೀಲ, ಅಡ್ವಕೇಟ್ ದೀಪಕ್ ಖೋಸ್ಲಾ ನೀಡಿದ ಹೇಳಿಕೆಯ ನಂತರ ಅರ್ಜಿಯನ್ನು ಹಿಂಪಡೆಯಲು ಅನುಮತಿ ನೀಡಿದರು.
" 5 ಜಿ ನೆಟ್ ವರ್ಕ್ ವಿರುದ್ಧದ ತನ್ನ ಮೊಕದ್ದಮೆಯನ್ನು "ವಜಾಗೊಳಿಸುವ" ಬದಲು "ತಿರಸ್ಕರಿಸಲಾಗಿದೆ" ಎಂದು ಘೋಷಿಸಬೇಕೆಂದು ಕೋರಿ ಚಾವ್ಲಾ ಅರ್ಜಿಯನ್ನು ಸಲ್ಲಿಸಿದ್ದರು.
Next Story