ಪ್ಯಾರಾಲಿಂಪಿಕ್ಸ್: ಚಿನ್ನ ಜಯಿಸಿದ ಸುಮಿತ್ ಅಂಟಿಲ್ ಗೆ 6 ಕೋ.ರೂ.ಬಹುಮಾನ
ಹೊಸದಿಲ್ಲಿ: ಪ್ಯಾರಾಲಿಂಪಿಕ್ಸ್ ನ ಜಾವೆಲಿನ್ ಎಸೆತದಲ್ಲಿ ಚಿನ್ನ ಜಯಿಸಿರುವ ಭಾರತದ ಸುಮಿತ್ ಅಂಟಿಲ್ ಅವರಿಗೆ ಹರ್ಯಾಣ ಸರಕಾರವು 6 ಕೋ.ರೂ. ಬಹುಮಾನ ಹಾಗೂ ಸರಕಾರಿ ಉದ್ಯೋಗ ನೀಡುವುದಾಗಿ ಘೋಷಿಸಿದೆ.
ಪುರುಷರ ಎಫ್ 56 ವಿಭಾಗದ ಡಿಸ್ಕಸ್ ಎಸೆತದಲ್ಲಿ ಬೆಳ್ಳಿ ಪದಕ ಜಯಿಸಿರುವ ಯೋಗೇಶ್ ಕಥುನಿಯಾಗೆ 4 ಕೋ.ರೂ.ಬಹುಮಾನ ಹಾಗೂಸರಕಾರಿ ನೌಕರಿ ನೀಡುವುದಾಗಿ ಹರ್ಯಾಣ ಸರಕಾರ ತಿಳಿಸಿದೆ.
23ರ ಹರೆಯದ ಸುಮಿತ್ ಹರ್ಯಾಣದ ಸೋನಿಪತ್ ನವರು. 2015ರಲ್ಲಿ ಸಂಭವಿಸಿದ್ದ ಮೋಟಾಬೈಕ್ ಅಪಘಾತದಲ್ಲಿ ಎಡಗಾಲು ಕಳೆದುಕೊಂಡಿದ್ದರು. ಡಿಸ್ಕಸ್ ಎಸೆತದಲ್ಲಿ ಬೆಳ್ಳಿ ಗೆದ್ದಿರುವ ಯೋಗೇಶ್ ಕೂಡ ಹರ್ಯಾಣದವರೇ.
Next Story