ಡ್ರಗ್ಸ್ ಪ್ರಕರಣ: ಕ್ರೂಸ್ ಹಡಗಿನಲ್ಲಿದ್ದ ಇಬ್ಬರು 'ಅತಿಥಿಗಳಿಗೆ' ಎನ್‌ಡಿಪಿಎಸ್ ಕೋರ್ಟ್ ಜಾಮೀನು

ಹೊಸದಿಲ್ಲಿ: ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಭಾಗಿಯಾಗಿದ್ದಾನೆ ಎನ್ನಲಾದ ಹೈ ಪ್ರೊಫೈಲ್ ಡ್ರಗ್ ಪ್ರಕರಣದಲ್ಲಿ ಬಂಧಿತರಾದ ಇಬ್ಬರಿಗೆ ಮಂಗಳವಾರ ಮುಂಬೈನ ವಿಶೇಷ ಎನ್‌ಡಿಪಿಎಸ್ ಆ್ಯಕ್ಟ್ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ಈ ಪ್ರಕರಣದಲ್ಲಿ ಮನೀಶ್ ರಾಜ್‌ಗಾರಿಯಾ ಹಾಗೂ ಅವಿನ್ ಸಾಹು ಮೊದಲ ಆರೋಪಿಗಳಾಗಿ ಜಾಮೀನು ಪಡೆದರು. ಇಬ್ಬರೂ ಮೂಲತಃ ಒಡಿಶಾದ ರೂರ್ಕೆಲಾದವರು ಎಂದು ವರದಿಗಳು ತಿಳಿಸಿವೆ.
ಅಕ್ಟೋಬರ್ 2 ರಂದು ಮುಂಬೈ ಕರಾವಳಿಯಲ್ಲಿ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡ ಕ್ರೂಸ್ ಹಡಗಿನಲ್ಲಿ ಈ ಇಬ್ಬರು "ಅತಿಥಿಗಳಾಗಿದ್ದರು" ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಹೇಳಿಕೊಂಡಿದೆ. ಈ ಇಬ್ಬರನ್ನು ಅಕ್ಟೋಬರ್ 5 ರಂದು ಬಂಧಿಸಲಾಯಿತು.
Next Story





