ಮೊಬೈಲ್ ಪಾವತಿಗಳು ಕಳೆದ ವರ್ಷ ಎಟಿಎಂನಿಂದ ಹಣ ಹಿಂಪಡೆಯುವಿಕೆಯನ್ನು ಮೀರಿಸಿದೆ: ಪ್ರಧಾನಿ ಮೋದಿ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬೆಳಗ್ಗೆ 10 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಫಿನ್ಟೆಕ್ ವಲಯದ ಚಿಂತನಾ ನಾಯಕತ್ವ ವೇದಿಕೆಯಾದ ಇನ್ಫಿನಿಟಿ ಫೋರಂ ಅನ್ನು ಉದ್ಘಾಟಿಸಿದರು.
ತಮ್ಮ ಭಾಷಣದಲ್ಲಿ, ಪ್ರಧಾನಿ ಮೋದಿ ಅವರು ಮೊಬೈಲ್ ಪಾವತಿಗಳ ಬೆಳವಣಿಗೆಯನ್ನು ಶ್ಲಾಘಿಸಿದರು. ಇದು ಕಳೆದ ವರ್ಷ ಮೊದಲ ಬಾರಿಗೆ ಎಟಿಎಂ ಹಿಂಪಡೆಯುವಿಕೆಗಳನ್ನು ಮೀರಿಸಿದೆ ಎಂದು ಹೇಳಿದರು.
"ಯಾವುದೇ ಭೌತಿಕ ಶಾಖೆಗಳಿಲ್ಲದ ಸಂಪೂರ್ಣ ಡಿಜಿಟಲ್ ಬ್ಯಾಂಕ್ಗಳು ಈಗಾಗಲೇ ರಿಯಾಲಿಟಿ ಆಗಿವೆ ಹಾಗೂ ಒಂದು ದಶಕಕ್ಕಿಂತ ಕಡಿಮೆ ಅವಧಿಯಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಅಥವಾ ಅದರ ಸುತ್ತಲೂ ಆವಿಷ್ಕಾರದ ವಿಚಾರದಲ್ಲಿ ಭಾರತವು ಎರಡನೆ ಸ್ಥಾನದಲ್ಲಿದೆ ಎಂದು ಜಗತ್ತಿಗೆ ಸಾಬೀತುಪಡಿಸಿದೆ" ಎಂದು ಅವರು ಹೇಳಿದರು.
Next Story