ಪ್ರಧಾನಿ ಮೋದಿಯೊಂದಿಗಿನ ಸಂದರ್ಶನ ನೆನಪಿಸಿ ಅಕ್ಷಯ್ ಕುಮಾರ್ ಕಾಲೆಳೆದ ಕಪಿಲ್ ಶರ್ಮಾ: ವೀಡಿಯೊ ವೈರಲ್
Photo: Indianexpress
ಮುಂಬೈ: ಖ್ಯಾತ ಕಾಮಿಡಿಯನ್ ಕಪಿಲ್ ಶರ್ಮ ಇತ್ತೀಚೆಗೆ ತಮ್ಮ ಜನಪ್ರಿಯ ದಿ ಕಪಿಲ್ ಶರ್ಮ ಶೋ ದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಪ್ರಶ್ನೆಗೆ ಸರಿಯಾಗಿ ತಿರುಗೇಟು ನೀಡಿ ಮರುಪ್ರಶ್ನಿಸಿರುವ ವೀಡಿಯೋ ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿದೆ.
ಇತ್ತೀಚಿನ ಕಪಿಲ್ ಶರ್ಮ ಶೋ ನಲ್ಲಿ ನಟ ಅಕ್ಷಯ್ ಕುಮಾರ್, ನಟಿ ಸಾರಾ ಆಲಿ ಖಾನ್ ಮತ್ತು ನಿರ್ದೇಶಕ ಆನಂದ್ ಎಲ್ ರೈ ಭಾಗವಹಿಸಿ ತಮ್ಮ ಲೇಟೆಸ್ಟ್ ಚಿತ್ರ ʼಅತ್ರಂಗಿ ರೇ' ಪ್ರಮೋಷನ್ ನಡೆಸಿದ್ದರು.
ಈ ಕಾರ್ಯಕ್ರಮದ ಒಂದು 30 ಸೆಕೆಂಡ್ ಅವಧಿಯ ಕ್ಲಿಪ್ ಅಂತೂ ತುಂಬಾ ವೈರಲ್ ಆಗಿದೆ. ವೀಡಿಯೋದಲ್ಲಿ ಅಕ್ಷಯ್ ಕುಮಾರ್ ಅವರು ಕಪಿಲ್ ಕಾಲೆಳೆಯುತ್ತಾ, ನೀವು ಕಾಮಿಡಿಯನ್ ಗಳು ಯಾವತ್ತೂ ʼಸಿಲ್ಲಿʼ ಪ್ರಶ್ನೆಗಳನ್ನು ಕೇಳುತ್ತೀರಿ. ಪ್ರೇಕ್ಷಕರಿಂದ ಈ ಪ್ರಶ್ನೆ ಕೇಳಿದರು, ಮಕ್ಕಳು ಈ ಪ್ರಶ್ನೆ ಕೇಳಿದರು ಅರ್ಚನಾ ಈ ಪ್ರಶ್ನೆ ಕೇಳಿದರು ಅಂತ ನೀವೇಕೆ ಸಣ್ಣ ಪುಟ್ಟ ಪ್ರಶ್ನೆಗಳನ್ನು ಕೇಳುತ್ತೀರಿ? ಎಂದು ಪ್ರಶ್ನಿಸಿದ್ದರು.
ಇದಕ್ಕೆ ಕಪಿಲ್ ಶರ್ಮ ಖಡಕ್ ಪ್ರತಿಕ್ರಿಯೆ ನೀಡಿದ್ದು, 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಂದರ್ಶನ ನಡೆಸಿದ್ದಾಗ ಅಕ್ಷಯ್ ಕುಮಾರ್ ಅವರು ಪ್ರಧಾನಿಗೆ "ನೀವು ಮಾವಿನ ಹಣ್ಣುಗಳನ್ನು ಹೇಗೆ ತಿನ್ನಲು ಬಯಸುತ್ತೀರಿ?" ಎಂದು ಕೇಳಿದ್ದ ಪ್ರಶ್ನೆಯನ್ನು ನೆನಪಿಸಿ ಅವರಿಗೆ ತಿರುಗೇಟು ನೀಡಿದ್ದಾರೆ.
ಅಕ್ಷಯ್ ಕುಮಾರ್ ಅವರು ಪ್ರಧಾನಿಯ ಜತೆಗಿನ ಸಂದರ್ಶನದಲ್ಲಿ ಕೇಳಿದ್ದ ಹಲವು ಪ್ರಶ್ನೆಗಳು ಮಿಶ್ರ ಪ್ರತಿಕ್ರಿಯೆ ಹಾಗೂ ಸಾಕಷ್ಟು ಚರ್ಚೆಗೀಡಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
Well done Kapil Sharma pic.twitter.com/ejrn55if23
— Swati Chaturvedi (@bainjal) January 4, 2022
wll done @KapilSharmaK9 veere#modigoback https://t.co/rMtDQ648wp
— Abhijot Bajwa (@Abhijot0) January 4, 2022
Very very very well done @KapilSharmaK9 https://t.co/EmFTderMX7
— ginnie (@rjginnie) January 4, 2022
Accha dhoya @akshaykumar ko https://t.co/QIJtVJcYT6
—INS Vikrant(@vikrantaa) January 4, 2022