ಜನವರಿ 7ರಿಂದ ಯುಪಿಎಸ್ಸಿ ಪರೀಕ್ಷೆ
ಹೊಸದಿಲ್ಲಿ, ಜ. 5: ನಾಗರಿಕ ಸೇವಾ (ಮುಖ್ಯ) ಪರೀಕ್ಷೇ-2021 ವೇಳಾಪಟ್ಟಿಯಂತೆ ಶುಕ್ರವಾರ (ಜನವರಿ 7)ದಿಂದ ಆರಂಭವಾಗಲಿದೆ ಎಂದು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ)ಬುಧವಾರ ತಿಳಿಸಿದೆ.
ಅಭ್ಯರ್ಥಿಗಳು ಹಾಗೂ ಪರೀಕ್ಷಾಧಿಕಾರಿಗಳು ಪ್ರಯಾಣಿಸಲು ಯಾವುದೇ ಅನಾನುಕೂಲತೆ ಆಗದಿರಲು ಖಾತರಿ ನೀಡುವಂತೆ ಕೇಂದ್ರ ಲೋಕಸೇವಾ ಆಯೋಗ ರಾಜ್ಯ ಸರಕಾರಗಳಲ್ಲಿ ವಿನಂತಿಸಿದೆ. ಒಂದು ವೇಳೆ ಅಗತ್ಯವಾದರೆ ಅಭ್ಯರ್ಥಿಗಳು ಇ-ಪ್ರವೇಶಪತ್ರ ಹಾಗೂ ಪರೀಕ್ಷಾಧಿಕಾರಿಗಳು ಗುರುತು ಪತ್ರವನ್ನು ಪ್ರಯಾಣಕ್ಕೆ ಬಳಸಬಹುದು ಎಂದು ರಾಜ್ಯ ಸರಕಾರ ತಿಳಿಸಿದೆ ಎಂದು ಯುಪಿಎಸ್ಸಿ ಹೇಳಿದೆ. ಕೋವಿಡ್ ಸಾಂಕ್ರಾಮಿಕ ರೋಗದ ಪರಿಸ್ಥಿತಿಯನ್ನು ಜಾಗರೂಕವಾಗಿ ಪರಿಶೀಲಿಸಿದ ಬಳಿಕ ಆಯೋಗ ನಾಗರಿಕ ಸೇವಾ ಪರೀಕ್ಷೆ ನಡೆಸಲು ನಿರ್ಧರಿಸಿದೆ. ವೇಳಾಪಟ್ಟಿಯಂತೆ ಜನವರಿ 7, 8, 9, 15, 16ರಂದು ಪರೀಕ್ಷೆ ನಡೆಯಲಿದೆ ಎಂದು ಯುಪಿಎಸ್ಸಿ ಹೇಳಿಕೆ ತಿಳಿಸಿದೆ.
Next Story