ಕೆಸರು ಹಾರಿಸಿದ ಬೈಕ್ ಸವಾರನಿಂದ ಪ್ಯಾಂಟ್ ಸ್ವಚ್ಛ ಮಾಡಿಸಿಕೊಂಡು ಕಪಾಳಕ್ಕೆ ಬಾರಿಸಿದ ಮಹಿಳಾ ಪೊಲೀಸ್; ವಿಡಿಯೋ ವೈರಲ್
Twitter/@Anurag_Dwary
ಭೋಪಾಲ್: ವ್ಯಕ್ತಿಯೊಬ್ಬ ತನ್ನ ಬೈಕ್ ಅನ್ನು ಹಿಮ್ಮುಖವಾಗಿ ಚಲಿಸಲು ಪ್ರಯತ್ನಿಸುತ್ತಿದ್ದಾಗ ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರ ಮೇಲೆ ಕೆಸರು ಎರಚಿದ್ದು, ಮಹಿಳಾ ಪೊಲೀಸ್, ಕೆಸರು ಎರಚಿದ ವ್ಯಕ್ತಿಯಿಂದ ತನ್ನ ಪ್ಯಾಂಟ್ ಅನ್ನು ಸ್ವಚ್ಚಗೊಳಿಸಿಕೊಂಡಿದ್ದಲ್ಲದೆ ಆತನ ಕಪಾಳಕ್ಕೆ ಬಾರಿಸಿರುವ ಘಟನೆ ಮಧ್ಯಪ್ರದೇಶದ ರೇವಾದ ಸಿರ್ಮೌರ್ ಚೌಕ್ ಬಳಿ ನಡೆದಿದೆ ಎಂದು ndtv ವರದಿ ಮಾಡಿದೆ.
ಕೆಸರು ಎರಚುವ ಘಟನೆಯ ಯಾವುದೇ ವೀಡಿಯೊ ಇಲ್ಲದಿದ್ದರೂ, ಪೊಲೀಸ್ ಮಹಿಳೆಯ ಬಿಳಿ ಪ್ಯಾಂಟ್ ಅನ್ನು ವ್ಯಕ್ತಿಯೊಬ್ಬ ಸ್ವಚ್ಛಗೊಳಿಸುವ ಆರು ಸೆಕೆಂಡುಗಳ ಕ್ಲಿಪ್ ಆನ್ಲೈನ್ನಲ್ಲಿ ಹರಿದಾಡುತ್ತಿದ್ದು ಇದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
ಆ ವ್ಯಕ್ತಿ ಕೆಂಪು ಬಟ್ಟೆಯನ್ನು ಬಳಸಿ ಪ್ಯಾಂಟ್ ಅನ್ನು ಸ್ವಚ್ಛಗೊಳಿಸಿದ ನಂತರ ಮುಖ ಮರೆಸಿಕೊಂಡಿದ್ದ ಮಹಿಳಾ ಪೊಲೀಸ್ ಸವಾರನಿಗೆ ಕಪಾಳಮೋಕ್ಷ ಮಾಡಿದ್ದಾರೆ.
ಮಹಿಳಾ ಪೊಲೀಸ್ ಅನ್ನು ಗೃಹರಕ್ಷಕ ದಳದ ಕಾನ್ಸ್ಟೇಬಲ್ ಶಶಿಕಲಾ ಎಂದು ಗುರುತಿಸಲಾಗಿದ್ದು, ಜಿಲ್ಲಾಧಿಕಾರಿ ಕಚೇರಿಗೆ ಹಾಜರಾಗಿದ್ದಾರೆ ಎಂದು ವರದಿಯಾಗಿದೆ.
मध्य प्रदेश के रीवा में एक महिला पुलिसकर्मी ने सिरमौर चौक के पास पहले युवक से पैंट साफ कराई. फिर उसे जोरदार थप्पड़ जड़ दिया. बाइक हटाते हुए महिला पुलिसकर्मी के पैंट में कीचड़ लग गया था @ndtv @ndtvindia @DGP_MP @drnarottammisra pic.twitter.com/m0hdSJ2mrZ
— Anurag Dwary (@Anurag_Dwary) January 12, 2022