ಕ್ಲಿನಿಕ್ ನಲ್ಲಿದ್ದ ಸಿಬ್ಬಂದಿಯನ್ನು ಕರೆಸಿ ಬೀದಿ ವ್ಯಾಪಾರಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ ವೈದ್ಯ!; ವಿಡಿಯೋ ವೈರಲ್
Photo: Twitter/@Anurag_Dwary
ಇಂದೋರ್: ಮಧ್ಯಪ್ರದೇಶದ ಇಂದೋರ್ನಲ್ಲಿ ಗುಂಪೊಂದು ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಮುಖ ಆರೋಪಿ ಓರ್ವ ವೈದ್ಯ ಎಂಬುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ndtv.com ವರದಿ ಮಾಡಿದೆ.
ವರದಿಗಳ ಪ್ರಕಾರ, ಗುರುವಾರ ಸಂಜೆ ಭನ್ವಾರ್ಕುವಾನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆರೋಪಿ ವೈದ್ಯ ತರಕಾರಿ ವ್ಯಾಪಾರ ಮಾಡುವ ಮಹಿಳೆಯೊಂದಿಗೆ ಕ್ಷುಲ್ಲಕ ವಿಚಾರದಲ್ಲಿ ಜಗಳವಾಡಿ, ಅವರ ತಳ್ಳುಗಾಡಿಯನ್ನು ತಳ್ಳಿಹಾಕಿದ್ದಾರೆ. ಇದರಿಂದಾಗಿ, ವ್ಯಾಪಾರಕ್ಕೆಂದು ಮಹಿಳೆ ಇಟ್ಟಿದ್ದ ಈರುಳ್ಳಿ, ಹಾಗೂ ಆಲೂಗಡ್ಡೆಗಳು ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿದೆ ಎನ್ನಲಾಗಿದೆ.
ತರಕಾರಿ ಮಾರುವ ದ್ವಾರಕಾ ಬಾಯಿ ಮತ್ತು ಅವರ ಮಗ ರಾಜು ಅವರನ್ನು ಗುಂಪೊಂದು ನಿರ್ದಯವಾಗಿ ಥಳಿಸುತ್ತಿರುವುದು ವಿಡಿಯೋದಲ್ಲಿ ಕಾಣಬಹುದು.
ಮಹಿಳೆ ಮತ್ತು ಆಕೆಯ ಮಗ ತಮ್ಮ ತಳ್ಳುಗಾಡಿ ಮುಂದೆ ನಿಲ್ಲಿಸಿದ್ದ ಕಾರನ್ನು ಸರಿಸಲು ವೈದ್ಯರನ್ನು ಕೇಳಿಕೊಂಡದ್ದೇ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ.
ಈ ವೇಳೆ ವಾಗ್ವಾದ ಉಂಡಾಗಿದ್ದು, ಕೋಪಗೊಂಡ ವೈದ್ಯ ತಮ್ಮ ಕ್ಲಿನಿಕ್ನಿಂದ ಸಿಬ್ಬಂದಿಯನ್ನು ಕರೆಸಿ ತಾಯಿ ಮತ್ತು ಮಗನನ್ನು ಥಳಿಸಿದ್ದಾರೆ. ನಂತರ ಅವರ ತಳ್ಳು ಗಾಡಿಯನ್ನು ಉರುಳಿಸಿದ್ದಾರೆ.
ಕೆಲವೇದಿನಗಳ ಹಿಂದೆ ಭೋಪಾಲ್ನಲ್ಲಿ ಕೂಡಾ ಇಂತಹದ್ದೇ ಘಟನೆಯೊಂದು ನಡೆದಿದ್ದು, ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಮಹಿಳಾ ಪ್ರಾಧ್ಯಾಪಕರೊಬ್ಬರು ಹಣ್ಣು ಮಾರಾಟಗಾರರ ಜೊತೆ ರೇಗಾಡಿ, ಅವರ ಪಪ್ಪಾಯಿಗಳನ್ನು ರಸ್ತೆಯಲ್ಲಿ ಒಡೆದು ಹಾಕುವ ವಿಡಿಯೋ ವೈರಲ್ ಆಗಿತ್ತು.
Vegetable vendor in Indore,were beaten up mercilessly by a group of men.Witnesses say they asked a doctor to move his car that he had parked in front of their pushcart. Fuming over the argument,the doctor called his staff from his clinic and got the mother and son beaten up. pic.twitter.com/JoluHH67Lq
— Anurag Dwary (@Anurag_Dwary) January 15, 2022