ಮರ್ಕಝ್ ನಾಲೇಜ್ ಸಿಟಿಯಲ್ಲಿ ಕಟ್ಟಡ ಕುಸಿತ: ಹಲವು ಕಾರ್ಮಿಕರಿಗೆ ಗಾಯ
Photo: Kaumudy
ಕೋಝಿಕ್ಕೋಡ್: ಜಿಲ್ಲೆಯ ಕೈದಪೊಯಿಲ್ನಲ್ಲಿರುವ ಮರ್ಕಝ್ ನಾಲೇಜ್ ಸಿಟಿಯಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಬಿದ್ದಿದೆ. ಅಪಘಾತದಲ್ಲಿ ಸುಮಾರು ಇಪ್ಪತ್ತು ಮಂದಿ ಗಾಯಗೊಂಡಿದ್ದು, ಐವರ ಸ್ಥಿತಿ ಚಿಂತಾಜನಕವಾಗಿದೆ ಎಂದು Kaumudy ವರದಿ ಮಾಡಿದೆ. ಗಾಯಗೊಂಡವರು ಕಟ್ಟಡ ಕಾರ್ಮಿಕರಾಗಿದ್ದು, ಅವರನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ.
ಖಾಸಗಿ ಶಾಲೆಯ ಕಟ್ಟಡ ನಿರ್ಮಾಣದ ವೇಳೆ ಈ ಅವಘಡ ಸಂಭವಿಸಿದೆ. ಮೊದಲ ಅಂತಸ್ತಿನ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿತ್ತು. ಪಿಲ್ಲರ್ ಜಾರಿ ಬಿದ್ದು ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಕಟ್ಟಡದ ಕುಸಿದ ಭಾಗಗಳನ್ನು ತೆರವುಗೊಳಿಸಲಾಗುತ್ತಿದೆ.
ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ನೇತೃತ್ವದ ಟ್ರಸ್ಟ್ಗೆ ಈ ಕಟ್ಟಡ ಸೇರಿದೆ.
ಭವ್ಯ ಮಸೀದಿ, ಕಾನೂನು ಕಾಲೇಜು ಸೇರಿದಂತೆ ವಿವಿಧ ಕಟ್ಟಡಗಳು ಇರುವ ಜಾಗದಲ್ಲಿ ಈ ಅವಘಡ ಸಂಭವಿಸಿದೆ ಎಂದು ವರದಿ ತಿಳಿಸಿದೆ.
Next Story