ತಮಿಳುನಾಡು ಬಾಲಕಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು

Photo: Twitter
ಚೆನ್ನೈ: ತಮಿಳುನಾಡಿನ 17 ವರ್ಷದ ಶಾಲಾ ಬಾಲಕಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ವೀಡಿಯೋವೊಂದು ಹರಿದಾಡುತ್ತಿದ್ದು ಅದರಲ್ಲಿ ಆಕೆ ತನಗೆ ಕಡಿಮೆ ಅಂಕಗಳು ದೊರೆಯಬಹುದೆಂದು ಭೀತಿಯಿಂದ 'ವಿಷ ಸೇವಿಸಿರುವುದಾಗಿʼ ಹೇಳುವುದು ಕೇಳಿಸುತ್ತದೆ. ಈ ಹಿನ್ನೆಲೆಯಲ್ಲಿ ಇದೀಗ ಈ ಪ್ರಕರಣವನ್ನು ಬಲವಂತದ ಮತಾಂತರ ಎಂದು ಬಿಂಬಿಸಿದ್ದ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರನ್ನು ಬಂಧಿಸಬೇಕೆಂದು ಟ್ವಿಟರ್ ನಲ್ಲಿ #arrestannamalai ಎಂಬ ಹ್ಯಾಶ್ಟ್ಯಾಗ್ ಮೂಲಕ ನೆಟ್ಟಿಗರು ಆಗ್ರಹಿಸಿದ್ದಾರೆ.
ಕಲಿಕೆಯಲ್ಲಿ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ, ಹಾಸ್ಟೆಲ್ ವಾರ್ಡನ್ ತನಗೆ ಹಾಸ್ಟೆಲ್ ಶುಚಿಗೊಳಿಸುವುದು, ಲೆಕ್ಕಪತ್ರ ನೋಡಿಕೊಳ್ಳುವುದು ಹೀಗೆ ಬೇರೆ ಕೆಲಸ ವಹಿಸಿದ್ದರು ಎಂದು ಆಕೆ ಹೇಳುವುದು ಕೇಳಿಸುತ್ತದೆ. ಈ ವೀಡಿಯೋದ ಸತ್ಯಾಸತ್ಯತೆ ದೃಢಪಟ್ಟಿಲ್ಲ.
ಇದಕ್ಕೂ ಮುಂಚೆ ಹರಿದಾಡಿದ ಇನ್ನೊಂದು ವೀಡಿಯೋದಲ್ಲಿ ಆಕೆ ತನ್ನ ಹಾಸ್ಟೆಲ್ ವಾರ್ಡನ್ ತನ್ನನ್ನು ನಿಂದಿಸಿದ್ದಾರೆ ಹಾಗೂ ತನ್ನನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೈಯ್ಯುವ ಯತ್ನದ ಬಗ್ಗೆ ಮಾತನಾಡಿದ್ದಳು.
ಆಕೆಯ ಹೆತ್ತವರ ಹೇಳಿಕೆಯನ್ನು ದಾಖಲಿಸುವಂತೆ ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠ ಆದೇಶಿಸಿದೆ. ಆಕೆಯ ಹೇಳಿಕೆ ಕುರಿತ ವೀಡಿಯೋ ಚಿತ್ರೀಕರಿಸಿದ ವ್ಯಕ್ತಿ ತನ್ನ ಫೋನ್ ಅನ್ನು ಫೊರೆನ್ಸಿಕ್ ತಪಾಸಣೆಗೆ ಹಾಜರುಪಡಿಸಬೇಕೆಂದೂ ನ್ಯಾಯಾಲಯ ಸೂಚಿಸಿದೆ. ಈಗ ಆ ಫೋನ್ ಪೊಲೀಸರ ವಶದಲ್ಲಿದೆ.
ಹುಡುಗಿಯ ಹೇಳಿಕೆಯನ್ನು ಕ್ಯಾಮರಾದಲ್ಲಿ ಸೆರೆ ಹಿಡಿದ ವ್ಯಕ್ತಿಗೆ ಯಾವುದೇ ಕಿರುಕುಳ ನೀಡದಂತೆ ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆಯಲ್ಲದೆ ಬದಲು ಆಕೆಯ ಆತ್ಮಹತ್ಯೆಗೆ ಕಾರಣಗಳೇನು ಎಂಬ ಕುರಿತು ತನಿಖೆಗೆ ಒತ್ತು ನೀಡುವಂತೆ ಸೂಚಿಸಿದೆ.
ಬಾಲಕಿ ಜನವರಿ 9ರಂದು ತಂಜಾವೂರಿನ ತನ್ನ ನಿವಾಸದಲ್ಲಿ ವಿಷ ಸೇವಿಸಿದ್ದರೆ, ಹತ್ತು ದಿನಗಳ ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಘಟನೆ ಸಂಬಂಧ ಹಾಸ್ಟೆಲ್ ವಾರ್ಡನ್ನನ್ನು ಬಂಧಿಸಲಾಗಿದೆ. ಆದರೆ ಪ್ರಕರಣವನ್ನು ಬಲವಂತದ ಮತಾಂತರದ ಕಾರಣ ಯುವತಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು ಎಂಬಂತೆ ತಮಿಳುನಾಡು ಬಿಜೆಪಿ ಬಿಂಬಿಸಿತ್ತು.
BJP is the only party that can turn IPS officers into criminals. It is shocking to hear that @annamalai_k was aware of each and every move of his goons. Moment of shame for @BJP4TamilNadu #ArrestAnnamalai
— Sphinx (@sphinx676) January 27, 2022
#ArrestAnnamalai immediately for criminal conspiracy, conspiracy to create religious riot, suppression of evidence, spreading false news with an intent to create communal riot. Your prompt action in this case will be a clear warning to people with such intentions.@tnpoliceoffl https://t.co/aItMoahCoJ
— Dr Balakrishnan S (@balasbio) January 27, 2022
#ArrestAnnamalai immediately for criminal conspiracy, conspiracy to create religious riot, suppression of evidence, spreading false news with an intent to create communal riot. Your prompt action in this case will be a clear warning to people with such intentions.@tnpoliceoffl https://t.co/aItMoahCoJ
— Dr Balakrishnan S (@balasbio) January 27, 2022
Criminals like @annamalai_k must be taught an unforgettable lesson for tampering the evidence to create communal unrest in the state!
— இசை (@isai_) January 27, 2022
Hope law is equal for everyone @mkstalin @tnpoliceoffl #ArrestAnnamalai https://t.co/g05hw03R3Q
#BREAKINGNEWS | New Video Surfaced on the student suicide! BJP tampered the original video to instigate communal violence! @annamalai_k must be tried for the crime and justice must prevail! #ArrestAnnamalai pic.twitter.com/IuVQ3HkkN6
— இசை (@isai_) January 27, 2022
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.