ಹಿರಿಯ ಗಾಯಕಿ ಸಂಧ್ಯಾ ಮುಖರ್ಜಿ ಅಸ್ವಸ್ಥ; ಆಸ್ಪತ್ರೆಗೆ ದಾಖಲು
Photo :Facebook
ಕೋಲ್ಕತಾ, ಜ. 27: ಹಿರಿಯ ಗಾಯಕಿ ಸಂಧ್ಯಾ ಮುಖರ್ಜಿ ಅವರ ಆರೋಗ್ಯ ಗುರುವಾರ ಬೆಳಗ್ಗೆ ಹದಗೆಟ್ಟಿದ್ದು, ಇಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಸಿರಾಟದ ತೊಂದರೆ ಕಂಡು ಬಂದ ಹಿನ್ನೆಲೆಯಲ್ಲಿ 90 ವರ್ಷದ ಗಾಯಕಿಯನ್ನು ದಕ್ಷಿಣ ಕೋಲ್ಕತ್ತಾದಲ್ಲಿರುವ ಅವರ ನಿವಾಸದಿಂದ ಶೂನ್ಯ ಟ್ರಾಫಿಕ್ ರೂಪಿಸಿ ರಾಜ್ಯ ಸ್ವಾಮಿತ್ವದ ಎಸ್ಎಸ್ಕೆಎಂ ಆಸ್ಪತ್ರೆಗೆ ಕರೆ ತಂದು ದಾಖಲಿಸಲಾಗಿದೆ.
ನಿನ್ನೆ ಸಂಜೆ ಸ್ನಾನಗೃಹದಲ್ಲಿ ಕುಸಿದು ಬಿದ್ದ ಬಳಿಕ ಮುಖರ್ಜಿ ಅವರ ಆರೋಗ್ಯ ಹದಗೆಡಲು ಆರಂಭಿಸಿತು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
‘‘ಅವರ ಎರಡು ಶ್ವಾಸಕೋಶ ಸೋಂಕಿಗೆ ಒಳಗಾಗಿದೆ. ಅವರು ನಿನ್ನೆ ಸ್ನಾನಗೃಹದಲ್ಲಿ ಕುಸಿದು ಬಿದ್ದಿದ್ದರು. ಅವರಿಗೆ ಜ್ವರ ಕೂಡ ಇದೆ. ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ’’ ಎಂದು ಗಾಯಕಿಯ ಆರೋಗ್ಯ ಪರಿಶೀಲಿಸಲು ಎಸ್ಎಸ್ಕೆಎಂ ರೂಪಿಸಿದ ವೈದ್ಯಕೀಯ ಮಂಡಳಿ ತಿಳಿಸಿದೆ.
Next Story