ಮತ್ತೊಮ್ಮೆ ಕಾಗದ ರಹಿತ ಬಜೆಟ್ ಮಂಡಿಸಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಹೊಸದಿಲ್ಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ವರ್ಷದಂತೆ 2022 ರ ಬಜೆಟ್ ಅನ್ನು ಕಾಗದರಹಿತ ರೂಪದಲ್ಲಿ ಮಂಡಿಸಲಿದ್ದಾರೆ. ಅವರು ಇಂದು ಬೆಳಿಗ್ಗೆ ಕೆಂಪು ಚೀಲದಲ್ಲಿ ರಾಷ್ಟ್ರೀಯ ಲಾಂಛನವನ್ನು ಹೊಂದಿರುವ ಟ್ಯಾಬ್ಲೆಟ್ ಅನ್ನು ಕೊಂಡೊಯ್ಯುತ್ತಿರುವುದು ಕಂಡುಬಂದಿದೆ.
ಕೋವಿಡ್ ನಿರ್ಬಂಧಗಳ ಕಾರಣ ಈ ವರ್ಷ ಮೊದಲ ಬಾರಿಗೆ ಯಾವುದೇ ಸಾಂಪ್ರದಾಯಿಕ "ಹಲ್ವಾ ಸಮಾರಂಭ" ಇರಲಿಲ್ಲ. ಬಜೆಟ್ಗೆ ಒಂದು ದಿನ ಮೊದಲು ಹಣಕಾಸು ಸಚಿವರು ಮತ್ತು ಅಧಿಕಾರಿಗಳು ಹಲ್ವಾ ಡೇ ಆಚರಿಸುತ್ತಾರೆ.
2019 ರಲ್ಲಿ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಪೇಪರ್ಗಳನ್ನು ಬ್ರೀಫ್ಕೇಸ್ನಲ್ಲಿ ಸಾಗಿಸುವ ವಸಾಹತುಶಾಹಿ ಪದ್ಧತಿಯ ವಿರುದ್ಧವಾಗಿ ಸಾಂಪ್ರದಾಯಿಕ "ಬಹಿ ಖಾತಾ" ದಲ್ಲಿ ಪೇಪರ್ ಗಳನ್ನು ಇರಿಸಿದ್ದರು.
ಕಳೆದ ವರ್ಷ ಸರಕಾರದ ಡಿಜಿಟಲ್ ಇಂಡಿಯಾ ಉತ್ತೆಜನಕ್ಕೆ ಅನುಗುಣವಾಗಿ ಮೊದಲ ಬಾರಿಗೆ ಬಜೆಟ್ ಅನ್ನು ಡಿಜಿಟಲ್ ರೂಪದಲ್ಲಿ ಮಂಡಿಸಲಾಯಿತು.
Next Story