ಈ ಬಾರಿ ಅತ್ಯಂತ ಸಣ್ಣ ಅವಧಿಯ ಬಜೆಟ್ ಭಾಷಣ ಮಾಡಿದ ನಿರ್ಮಲಾ ಸೀತಾರಾಮನ್
ಹೊಸದಿಲ್ಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿಯ ಬಜೆಟ್ ಭಾಷಣವನ್ನು ಸುಮಾರು 92 ನಿಮಿಷಗಳಲ್ಲಿ ಮುಗಿಸಿದರು. ಇದು ಅವರ ಈ ತನಕದ ಬಜೆಟ್ ಭಾಷಣದ ಪೈಕಿ ಅತ್ಯಂತ ಚಿಕ್ಕದ್ದಾಗಿದೆ.
ಕಳೆದ ವರ್ಷ ಅವರು ಒಂದು ಗಂಟೆ 50 ನಿಮಿಷಗಳ ಕಾಲ ಮಾತನಾಡಿದ್ದರು.
2020 ರಲ್ಲಿ ಅವರ ಭಾಷಣವು ಸುಮಾರು 2 ಗಂಟೆ 40 ನಿಮಿಷಗಳ ಕಾಲ ನಡೆದಿದ್ದು, ಭಾರತದ ಇತಿಹಾಸದಲ್ಲಿ ಸುದೀರ್ಘವಾದದ್ದು ಎಂದು ಬಿಂಬಿತವಾಗಿತ್ತು.
2019 ರ ಬಜೆಟ್ ಮಂಡನೆಯಲ್ಲಿ ಸೀತಾರಾಮನ್ ಅವರು 2 ಗಂಟೆ 17 ನಿಮಿಷಗಳ ಕಾಲ ಮಾತನಾಡಿದ್ದರು. ಮಾಜಿ ಹಣಕಾಸು ಸಚಿವ ಜಸ್ವಂತ್ ಸಿಂಗ್ ಅವರ 2003 ರ 2 ಗಂಟೆ 15 ನಿಮಿಷಗಳ ದಾಖಲೆಯನ್ನು ಮುರಿದಿದ್ದರು.
ಸಾಮಾನ್ಯವಾಗಿ ಬಜೆಟ್ ಮಂಡನೆಯ ಅವಧಿಯು 90 ರಿಂದ 120 ನಿಮಿಷಗಳವರೆಗೆ ಇರುತ್ತದೆ.
Next Story