"ಸಂಸತ್ ನಲ್ಲಿ ಭಾಷಣ ಮಾಡಲಿದ್ದೇನೆ, ಗೋಮೂತ್ರ ಹನಿ ಸೇವಿಸಿ ಸಿದ್ಧರಾಗಿ": ಬಿಜೆಪಿಗರಿಗೆ ಮಹುವಾ ಮೊಯಿತ್ರಾ
ಮಹುವಾ ಮೊಯಿತ್ರಾ (PTI)
ಹೊಸದಿಲ್ಲಿ: ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಭಾಗವಾಗಿ ಇಂದು ಲೋಕಸಭೆಯಲ್ಲಿ ಭಾಷಣ ಮಾಡಲಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ತಮ್ಮ ಭಾಷಣದಲ್ಲಿ ಏನಿರಬಹುದೆಂಬ ಸುಳಿವು ನೀಡಲು ಪ್ರಯತ್ನಿಸಿದ್ದಾರೆ.
ತಮ್ಮ ಭಾಷಣಕ್ಕೆ ಸಿದ್ಧರಾಗುವಂತೆ "ಅಡ್ಡಿ ಮಾಡುವ ತಂಡ''ಕ್ಕೆ ಅವರು ಕರೆ ನೀಡಿದ್ದಾರೆ. "ಇಂದು ಸಂಜೆ ಲೋಕಸಭೆಯಲ್ಲಿ ಮಾತನಾಡಲಿದ್ದೇನೆ. ಬಿಜೆಪಿಗೆ ತನ್ನ ಅಡ್ಡಿ ಮಾಡುವವರ ತಂಡವನ್ನು ಸಿದ್ಧಪಡಿಸಲು ಹೇಳುತ್ತಿದ್ದೇನೆ. ಕೆಲ ಗೋಮೂತ್ರ ಹನಿಗಳನ್ನೂ ಸೇವಿಸಿ,'' ಪಶ್ಚಿಮ ಬಂಗಾಳದ ಕೃಷ್ಣನಗರ ಕ್ಷೇತ್ರದ ಸಂಸದೆ ಎಂದು ಮಹುವಾ ವ್ಯಂಗ್ಯವಾಡಿದ್ದಾರೆ.
Am speaking this evening in Lok Sabha on President’s Address.
— Mahua Moitra (@MahuaMoitra) February 3, 2022
Just wanted to give early heads up to @BJP to get heckler team ready & read up on imaginary points of order. Drink some gaumutra shots too.
Next Story