ಉಕ್ರೇನಿ ಅತಿಥಿ ಎಂದು ಭಾವಿಸಿ ರಷ್ಯಾದ ಅತಿಥಿ ಮೇಲೆ ರೇಗಾಡಿದ ಟೈಮ್ಸ್ ನೌ ಪ್ರಧಾನ ಸಂಪಾದಕ ರಾಹುಲ್ ಶಿವಶಂಕರ್ !
ಸಾಮಾಜಿಕ ತಾಣದಲ್ಲಿ ನಗೆಪಾಟಲಿಗೀಡಾದ ವೀಡಿಯೊ ತುಣುಕು
ಹೊಸದಿಲ್ಲಿ: ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ಪ್ಯಾನೆಲ್ ಚರ್ಚೆಯಲ್ಲಿ ನಿರೂಪಕ ಅರ್ನಾಬ್ ಗೋಸ್ವಾಮಿಗೆ ಅತಿಥಿಯೊಬ್ಬರು ಕ್ಲಾಸ್ ತೆಗೆಯುವ ವಿಡಿಯೋ ವೈರಲ್ ಆದ ಕೆಲವೇ ದಿನಗಳ ಬೆನ್ನಿಗೆ ಇದೀಗ, ಟೈಮ್ಸ್ ನೌ ವಾಹಿನಿಯ ಪ್ರಧಾನ ಸಂಪಾದಕ, ನಿರೂಪಕ ರಾಹುಲ್ ಶಿವಶಂಕರ್ರ ಅಂತಹದ್ದೇ ಯಡವಟ್ಟಿನ ತುಣುಕು ಟ್ವಿಟರಿನಲ್ಲಿ ಹರಿದಾಡತೊಡಗಿದೆ.
ಇಬ್ಬರು ಅತಿಥಿಗಳೊಂದಿಗೆ ಉಕ್ರೇನ್ ಬಿಕ್ಕಟ್ಟಿನ ಕುರಿತು ಪ್ಯಾನೆಲ್ ಚರ್ಚೆ ನಡೆಸಿರುವ ಶಿವಶಂಕರ್, ಉಕ್ರೇನಿಯನ್ ಅತಿಥಿ ಎಂದು ಭಾವಿಸಿ ರಷ್ಯನ್ ಅತಿಥಿಯನ್ನು ಗದರಿಸಿರುವ ಪ್ರಸಂಗ ನಡೆದಿದೆ. ರಷ್ಯಾದ ಅತಿಥಿಯ ಹೆಸರು ಹಿಡಿದು ವಾಗ್ದಾಳಿ ನಡೆಸಿದ ಶಿವಶಂಕರ್, ʼನೀವು ಉಕ್ರೇನಿಯನ್ನರೊಂದಿಗೆ ಸೇರಿ ಹೋರಾಡಿʼ ಎಂದು ಒತ್ತಾಯಿಸಿದ್ದಾರೆ. ಭಾರತಕ್ಕೆ ಹೇಳಲು ಬರಬೇಡಿ, ನೀವು ನಿಮ್ಮ ವಸಾಹತುಶಾಹಿ ಮನಸ್ಥಿತಿಯಿಂದ ಹೊರಬನ್ನಿ ಎಂದು ಸುಮಾರು ಎರಡು ನಿಮಿಷಗಳ ಕಾಲ ರಷ್ಯನ್ ಅತಿಥಿಯ ಮೇಲೆ ಕೂಗಾಡುತ್ತಾರೆ.
ಸುಮಾರು ಎರಡು ನಿಮಿಷಗಳ ಕಾಲ ಮೌನವಾಗಿ ಕುಳಿತ ರಷ್ಯನ್ ಅತಿಥಿ ಕೊನೆಗೂ ಶಿವಶಂಕರ್ರನ್ನು ತರಾಟೆಗೆ ತೆಗದುಕೊಂಡಿದ್ದಾರೆ. ನಾನು ಇದುವರೆಗೂ ಮಾತೇ ಆಡಿಲ್ಲ, ನನ್ನ ಮೇಲೆ ಯಾಕೆ ಎಗರಾಡ್ತಿದ್ದೀರ ಎಂದು ರಷ್ಯನ್ ಅತಿಥಿ ಪ್ರಶ್ನಿಸಿದ್ದಾರೆ.
ಶಿವಶಂಕರ್ಗೆ ರಷ್ಯನ್ ಅತಿಥಿಯ ಪ್ರಶ್ನೆಯೊಂದಿಗೆ ತನ್ನ ಪ್ರಮಾದದ ಅರಿವಾಗಿದೆ. ತಕ್ಷಣವೇ ಕ್ಷಮೆ ಕೇಳಿ ತನಗಾದ ಗೊಂದಲ ಎಂದು ಸಮಜಾಯಿಷಿ ನೀಡಿದ್ದಾರೆ. ಆದರೆ, ಈ ವಿಡಿಯೋದ ತುಣುಕು ಸಾಕಷ್ಟು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ನಗೆಪಾಟಲಿಗೀಡಾಗಿದೆ.
The. Single. Best. Thing. You. Will. Watch. Today.https://t.co/rbAwQz88fD
— Mehdi Hasan (@mehdirhasan) March 3, 2022
Thanks for making twitter a happy place @RShivshankar
— अभिषेक सिंह भदौरिया (@AbhiKeeTweet) March 3, 2022
I am Mr. McAdams #Godimedia #TimesNowpic.twitter.com/AkLDwoHvjq